ತೆಲಂಗಾಣದಲ್ಲಿ ರಾಹುಲ್ ಅಬ್ಬರ; ಬುಡಕಟ್ಟು ಮಹಿಳೆಯರ ಜೊತೆ ನೃತ್ಯ
ಹೈದರಾಬಾದ್; ಭಾರತ್ ಜೋಡೋ ಯಾತ್ರೆ ತೆಲಂಗಾಣದಲ್ಲಿ ಸಾಗುತ್ತಿದೆ. ರಾಹುಲ್ ಹುಮ್ಮಸ್ಸಿನಿಂದ ಹೆಜ್ಜೆ ಹಾಕುತ್ತಿದ್ದಾರೆ. ಇಂದು ಧರ್ಮಪುರದಿಂದ ಯಾತ್ರೆ ಶುರುವಾಗಿದ್ದು, ರಾಹುಲ್ ಇಂದು ಮಾಡಿದ ಡ್ಯಾನ್ಸ್ ಜನರ ಮನಸೆಳೆಯಿತು.
ಬುಡಕಟ್ಟು ಜನಾಂಗದ ಮಹಿಳೆಯರು ರಾಹುಲ್ ಭೇಟಿಯಾಗಿದ್ದರು. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಅವರೊಂದಿಗೆ ರಾಹುಲ್ ಗಾಂಧಿ ಬುಡಕಟ್ಟು ನೃತ್ಯ ಮಾಡಿ ಗಮನ ಸೆಳೆದರು. ಭದ್ರಾಚಲಂನ ಆದಿವಾಸಿಗಳ ಪ್ರಾಚೀನ ನೃತ್ಯ ಪ್ರಾಕಾರವಾದ ‘ಕೊಮ್ಮು ಕೋಯಾ’ಗೆ ರಾಹುಲ್ ಗಾಂಧಿ ಕುಣಿದರು. ರಾಹುಲ್ ಗಾಂಧಿಯವರಿಗೆ ರುಮಾಲು ತೊಡಿಸಿ ಬುಡಕಟ್ಟು ಜನರು ಸನ್ಮಾನಿಸಿದರು. ರಾಹುಲ್ ಹೆಜ್ಜೆ ಹಾಕಿದರು.