ಹಿಜಾಬ್ ಧರಿಸಿದ ಮಹಿಳೆ ಪ್ರಧಾನಿಯಾಗಬೇಕು; ಓವೈಸ್ ವಿವಾದಿತ ಹೇಳಿಕೆ
ಹೈದರಾಬಾದ್; ಎಂಎಐಎಂ ನಾಯಕ ಅಸಾದುದ್ದಿನ್ ಒವೈಸಿಗೂ ವಿವಾದಕ್ಕೂ ಭಾರಿ ನಂಟು. ಅವರು ಒಂದಿಲ್ಲೊಂದು ವಿವಾದಿತ ಹೇಳಿಕೆ ನೀಡಿ ಸುದ್ದಿಯಲ್ಲಿರುತ್ತಾರೆ. ಹಿಜಾಬ್ ಸಂಬಂಧಿಸಿದಂತೆ ಇತ್ತೀಚೆಗೆ ಭಾರಿ ಚರ್ಚೆ ನಡೆಯುತ್ತಿದೆ. ಈ ಬೆನ್ನಲ್ಲೇ ಅವರು ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗುವುದನ್ನು ನೋಡಲು ನಾನು ಬಯಸುತ್ತೇನೆ ಎಂದು ಹೇಳುವ ಮೂಲಕ ಒವೈಸ್ ಮತ್ತೆ ಚರ್ಚೆಗೆ ಕಾರಣವಾಗಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆಯೊಂದು ಒವೈಸ್ ಮಾತನಾಡಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದ್ರಲ್ಲಿ ಒವೈಸಿ ಈ ರೀತಿಯ ಮಾತನ್ನಾಡಿದ್ದಾರೆ. ಮುಸ್ಲಿಂ ಅಸ್ಮಿತೆಗೆ ಬಿಜೆಪಿ ವಿರುದ್ಧವಾಗಿದೆ ಎಂದಿರುವ ಅವರು, ಭಾರತದ ವೈವಿಧ್ಯತೆ ಕೊನೆಗೊಳಿಸುವುದು ಬಿಜೆಪಿಯ ಅಜೆಂಡಾ ಎಂದು ಆರೋಪಿಸಿದ್ದಾರೆ.