ಸೈನಿಕರೊಂದಿಗೆ ಸೇರಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
ನವದೆಹಲಿ; ಪ್ರಧಾನಿ ನರೇಂದ್ರ ಮೋದಿಯವರು ಎಂದಿನಂತೆ ಈ ಬಾರಿಯೂ ಕೂಡಾ ಸೈನಿಕರ ಜೊತೆ ದೀಪಾವಳಿ ಆಚರಿಸಿಕೊಂಡರು. ಇದೇ ವೇಳೆ ಮಾತನಾಡಿರುವ ಪ್ರಧಾನಿ ಮೋದಿಯವರು ದೀಪಾವಳಿ ಎಂದರೆ ಭಯೋತ್ಪಾದನೆಯ ಅಂತ್ಯ ಎಂದು ಹೇಳಿದ್ದಾರೆ.
ನಮ್ಮ ಸೇನೆ ಭಯೋತ್ಪಾದನೆ ನಿಯಂತ್ರಿಸಿದೆ. ಕಾರ್ಗಿಲ್ ಯುದ್ಧದ ಬಳಿಕ ಪಾಕಿಸ್ತಾನದ ನಾವು ಯುದ್ಧ ಮಾಡಿಲ್ಲ. ನಮ್ಮ ಸೇವೆ ಗಡಿಯನ್ನು ರಕ್ಷಿಸುತ್ತಿರುವುದರಿಂದ ದೇಶದ ಪ್ರತಿಯೊಬ್ಬರೂ ನೆಮ್ಮದಿಯಾಗಿ ಮಲಗುತ್ತಿದ್ದಾರೆ. ನಮ್ಮ ದೇಶ ಶಾಂತಿ ಬಯಸುತ್ತದೆ. ಯುದ್ಧ ನಮಗೆ ಕೊನೆಯ ಆಯ್ಕೆ ಎಂದು ಪ್ರಧಾನಿ ಹೇಳಿದ್ದಾರೆ.
ಉಕ್ರೇನ್ ಯುದ್ಧದ ಸಮಯದಲ್ಲಿ ಅಲ್ಲಿ ಸಿಲುಕಿದ್ದ ಭಾರತೀಯರಿಗೆ ನಮ್ಮ ರಾಷ್ಟ್ರಧ್ವಜ ರಕ್ಷಣೆ ಗೆ ಬಂತು. ಜಗತ್ತಿನಾದ್ಯಂತ ಭಾರತದ ಗೌರವ ಹೆಚ್ಚಾಗಿದೆ ಎಂದು ಪ್ರಧಾನಿ ಇದೇ ವೇಳೆ ತಿಳಿಸಿದರು.