HealthLifestyle

ಮನುಷ್ಯರ ಎತ್ತರ ಹೆಚ್ಚಿಸೋ ಬ್ರೈನ್‌ ಸೆನ್ಸಾರ್‌ ಯಾವುದು ಗೊತ್ತಾ..?

ಮೆದುಳಿನಲ್ಲಿರುವ ಒಂದು ಸೆನ್ಸಾರ್‌ ಮೂಲಕ ಮನುಷ್ಯರು ಈಗಿರುವುದಕ್ಕಿಂತ ಎತ್ತರ ಬೆಳೆಯುವಂತೆ, ಸಮಯಕ್ಕೆ ಪ್ರೌಢಾವಸ್ಥೆಗೆ ಬರುವಂತೆ ಮಾಡಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಪೋಷಕ ಆಹಾರ ತೆಗೆದುಕೊಳ್ಳುತ್ತಾ ಆರೋಗ್ಯವಾಗಿರುವುದರ ಮೂಲಕ ೨೦ನೇ ಶತಮಾನದಲ್ಲಿ ಬ್ರಿಟನ್‌ ಪ್ರಜೆಗಳು ಸರಾಸರಿ ೧೦ ಸೆಂಟಿಮೀಟರ್‌ ಹೆಚ್ಚು ಎತ್ತರ ಬೆಳೆದರೆ, ಉಳಿದ ದೇಶಗಳ ಪ್ರಜೆಗಳು ಸರಾಸರಿ ೨೦ ಸೆಂಟಿಮೀಟರ್‌ ವರೆಗೂ ಹೆಚ್ಚು ಎತ್ತರ ಬೆಳೆದಿದ್ದಾರೆ.
ಆದರೆ, ಇದು ಹೇಗೆ ನಡೆಯುತ್ತದೆ ಎಂಬುದನ್ನು ಇಲ್ಲಿಯವರೆಗೆ ತಿಳಿಯಲು ತಜ್ಞರಿಗೆ ಸಾಧ್ಯವಾಗಿರಲಿಲ್ಲ. ಇದರ ಮೇಲೆ ಸಂಶೋಧನೆ ನಡೆದರೆ ನಮ್ಮ ಮಾಂಸಖಂಡಗಳು ಬಲಯುತ ಮಾಡಬಹುದು. ಜೊತೆಗೆ ಎತ್ತರ ಬೆಳೆಯಲು ಔಷಧಿ ತಯಾರು ಮಾಡಲು ಒಂದು ದಾರಿ ಸಿಗುತ್ತದೆ ಎಂದು ಬ್ರಿಟನ್‌ ಸಂಶೋಧಕರು ಹೇಳುತ್ತಿದ್ದಾರೆ.


ಪೌಷ್ಠಿಕ ಹಾಗೂ ನಿಯಮಿತವಾದ ಆಹಾರ ತೆಗೆದುಕೊಳ್ಳುವುದರಿಂದ ಮನುಷ್ಯ ಎತ್ತರವಾಗಿ ಬೆಳೆಯುತ್ತಾನೆಂದು, ಬಹುಬೇಗ ಪ್ರೌಢಾವಸ್ಥೆಗೆ ಬರುತ್ತಾನೆಂಬ ವಿಷಯ ನಮಗೆ ಗೊತ್ತಿರುವುದೇ. ಉದಾಹರಣೆಗೆ ಬಡ ದೇಶವಾಗಿದ್ದ ದಕ್ಷಿಣ ಕೊರಿಯಾ ಈಗ ಅಭಿವೃದ್ಧಿ ಹೊಂದಿದ್ದ ದೇಶವಾಗಿ ಬೆಳೆದಿದೆ. ಈಗ ಅಲ್ಲಿನ ಪ್ರಜೆಗಳ ಎತ್ತರ ಈ ಹಿಂದೆ ಇರುವುದಕ್ಕೆ ಹೋಲಿಸಿದರೆ ಸಾಕಷ್ಟು ಜಾಸ್ತಿಯಾಗಿದೆ. ಮತ್ತೊಂದು ಕಡೆ ದಕ್ಷಿಣ ಏಷ್ಯಾ, ಆಫ್ರಿಕಾದಲ್ಲಿನ ಹಲವಾರು ಪ್ರಾಂತ್ಯಗಳ ಜನರು ಈಗಲೂ ನೂರು ವರ್ಷಗಳ ಹಿಂದೆ ಇದ್ದವರನ್ನು ಹೋಲಿಸಿದರೆ ಈಗಲೂ ಸ್ವಲ್ಪ ಪ್ರಮಾಣದ ಎತ್ತರವಷ್ಟೇ ಬೆಳೆಯುತ್ತಿದ್ದಾರೆ.

ಮೆದುಳಿನ ಹೈಪೋಥೆಲೆಮಸ್‌ ಏನು ಮಾಡುತ್ತೆ ಗೊತ್ತಾ..?
ಆಹಾರಕ್ಕೆ ಸಂಬಂಧಿಸಿದ ಸಂಕೇತಗಳು ಮೆದುಳಿನಲ್ಲಿನ ಹೈಪೋಥೆಲೆಮಸ್‌ ಎಂಬ ಭಾಗವನ್ನು ಸೇರುತ್ತವೆ ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಶರೀರಕ್ಕೆ ಅವಶ್ಯಕವಾದ ಪೋಷಕಾಂಶಗಳ ಬಗ್ಗೆ ಮೆದುಳು ಅಂತಹದ್ದೇ ಸಂಕೇತಗಳನ್ನು ಪಡೆಯುತ್ತದೆ. ದೇಹವು ವೇಗವಾಗಿ ಬೆಳೆಯಲು ಕಾರಣವಾಗುತ್ತದೆ. ವಿಜ್ಞಾನ ಮತ್ತು ಸಂಶೋಧನಾ ಜರ್ನಲ್‌ ನೇಚರ್‌ ಈ ಕುರಿತ ಹೊಸ ಸಂಶೋಧನಾ ವರದಿಯನ್ನು ಪ್ರಕಡಿಸಿದೆ. ಕೇಂಬ್ರಿಡ್ಜ್‌ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ನೇತೃತ್ವದಲ್ಲಿ ಸಂಶೋಧನೆ ನಡೆಸಲಾಯಿತು. ಲಂಡನ್‌ನ ಕ್ವೀನ್‌ ಮೇರಿ ವಿಶ್ವವಿದ್ಯಾಲಯ, ಬ್ರಿಸ್ಟಲ್‌ ವಿಶ್ವವಿದ್ಯಾಲಯ, ಮಿಚಿಗನ್‌ ವಿಶ್ವವಿದ್ಯಾಲಯ ಮತ್ತು ವಾಂಡರ್‌ಬಿಲ್ಟ್‌ ವಿಶ್ವವಿದ್ಯಾಲಯದ ತಂಡಗಳೂ ಈ ಅಧ್ಯಯನದಲ್ಲಿ ಭಾಗವಹಿಸಿದ್ದವು.
ತಜ್ಞರು ತಮ್ಮ ಸಂಶೋಧನೆಯಲ್ಲಿ ಈ ಪ್ರಕ್ರಿಯೆಗೆ ಕಾರಣವಾದ ಒಂಧು ರಿಸೆಪ್ಟರ್‌ನ್ನು ಕಂಡುಹಿಡಿದಿದ್ದಾರೆ. ಅದನ್ನು ಎಂಸಿ೩ಆರ್‌ (MC3R) ಅಂತ ಕರೆಯುತ್ತಾರೆ. ಆಹಾರದ ಸಂಕೇತಗಳನ್ನು ನೀಡುವುದು, ಪ್ರೌಢ ವಯಸ್ಸಿಗೆ ಸೇರುವುದು ಸೇರಿದಂತೆ ಶರೀರ ಎತ್ತರ ಆಗುವುದಕ್ಕೆ ಕೂಡಾ ಈ ರಿಸೆಪ್ಟರ್‌ ತುಂಬಾ ಪ್ರಮುಖ ಪಾತ್ರ ವಹಿಸುತ್ತವೆ.

ಈ ರಿಸೆಪ್ಟರ್‌ ಏನು ಸಂದೇಶ ಕೊಡುತ್ತೆ ಗೊತ್ತಾ..?
ಶರೀರ ತುಂಬಾ ಆರೋಗ್ಯವಾಗಿದೆ. ದೇಹಕ್ಕೆ ಆಹಾರ ಸರಿಯಾಗಿ ಸೇರುತ್ತಿದೆ. ಹೀಗಾಗಿ ನೀನು ಬಹುಬೇಗ ಪ್ರೌಢಾವಸ್ಥೆಗೆ ಬಂದುಬಿಡು, ಹೆಚ್ಚಿನ ಮಕ್ಕಳನ್ನು ಪಡೆಯುವಂತಾಗು ಎಂದು ಈ ರಿಸೆಪ್ಟರ್‌ಗಳು ಹೇಳುತ್ತವೆಯಂತೆ. ಹೀಗಂತ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದ ಸಂಶೋಧಕರು ತಮ್ಮ ಸಂಶೋಧನೆಯಲ್ಲಿ ಖಚಿತಪಡಿಸಿದ್ದಾರೆ. ಇದು ಒಂದು ಅದ್ಭುತ, ಇದೆಲ್ಲಾ ಹೇಗೆ ನಡೆಯುತ್ತೆ..? ಮುಂತಾದ ವಿವರಗಳು ನಮ್ಮ ಬಳಿ ಇವೆ ಎಂದು ಸಂಶೋಧಕರು ಹೇಳುತ್ತಿದ್ದಾರೆ.

ಅಸಲಿಗೆ ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ..?
ನಮ್ಮಲ್ಲಿನ ಮೆದುಳಿನ ರಿಸೆಪ್ಟರ್‌ಗಳು ಸಾಮಾನ್ಯ ರೀತಿಯಲ್ಲಿ ಕೆಲಸ ಮಾಡದಿದ್ದರೆ ಅವರ ಎತ್ತರ ಕಡಿಮೆಯಾಗಿಯೇ ಇರುತ್ತದೆ. ಅಂತಹವರು ಇತರರಿಗೆ ಹೋಲಿಸಿದರೆ ಬಹಳ ತಡವಾಗಿ ಪ್ರೌಢಾವಸ್ಥೆಗೆ ಬರುತ್ತಾರೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಯುಕೆ ಬಯೋ ಬ್ಯಾಂಕ್‌ ( ಜೆನೆಟಿಕ್‌ ಹಾಗೂ ಹೆಲ್ತ್‌ ಸ್ಟ್ಯಾಟಿಸ್ಟಿಕ್ಸ್‌ ಡೇಟಾಬೇಸ್‌) ಜೊತೆ ಸಂಯೋಜಿತವಾಗಿರುವ ೫ ಲಕ್ಷ ಮಂದಿ ಸ್ವಯಂಸೇವಕರ ಜೆನೆಟಿಕ್‌ ನಿರ್ಮಾಣದ ಮೇಲೆ ಈ ತಂಡಗಳು ಅಧ್ಯಯನ ಮಾಡಿವೆ. ತಮ್ಮ ಸಂಶೋಧನೆಯಲ್ಲಿ ಕಂಡುಕೊಂಡ ವಿಷಯಗಳು ಸರಿಯಾಗಿವೆ ಎಂಬುದನ್ನೂ ದೃಢಪಡಿಸಿವೆ.

ಜನರು ಎತ್ತರ ಬೆಳೆಯುತ್ತಲೇ ಇರಬಹುದಾ..?
ಮನುಷ್ಯ ಎತ್ತರ ಬೆಳೆಯುವುದಕ್ಕೆ ಕೂಡಾ ಒಂದು ಮಿತಿ ಇರುತ್ತದೆ. ತಮ್ಮ ಜೆನೆಟಿಕ್‌ ಸಾಮರ್ಥ್ಯಕ್ಕೆ ತಕ್ಕಂತೆ ಜನರು ಎತ್ತರವಾಗಿ ಬೆಳೆಯುತ್ತಾರೆ. ಆ ಸಾಮರ್ಥ್ಯ ಎಷ್ಟು ಎಂಬುದನ್ನು ನಿರ್ಣಯಿಸುವುದರ ಮೇಲೆ ಅವರ ಆರೋಗ್ಯ, ಆಹಾರ ಮುಂತಾದ ವಿಷಯಗಳು ತುಂಬಾನೇ ಪ್ರಭಾವ ಬೀರುತ್ತವೆ.
ಬಡ ಕುಟುಂಬಗಳಲ್ಲಿ ಕೂಡಾ ಮಕ್ಕಳಿಗೆ ಪೌಷ್ಠಿಕ ಆಹಾರ, ಅಗತ್ಯವಿದ್ದಷ್ಟು ಕ್ಯಾಲರಿಗಳು ಸಿಕ್ಕರೆ ತಮ್ಮ ತಂದೆ-ತಾಯಿಗಳು, ಪೂರ್ವಿಕರ ರೀತಿಯಲ್ಲೇ ಎತ್ತರ ಬೆಳೆಯಬಹುದು. ಎತ್ತರವಾಗಿರುವವರು ಸಾಮಾನ್ಯವಾಗಿ ಸುದೀರ್ಘ ಕಾಲ ಜೀವನ ಮಾಡುತ್ತಾರೆ. ಅವರಿಗೆ ಹೃದಯದ ಸಮಸ್ಯೆ ಬರುವ ಸಾಧ್ಯತೆಗಳು ಕೂಡಾ ಕಡಿಮೆಯೇ.
ಆದರೆ, ಮನುಷ್ಯರ ಎತ್ತರ ಯಾವಾಗಲೂ ಬೆಳೆಯುತ್ತಲೇ ಇರುವುದಿಲ್ಲ. ಕಳೆದ ಶತಮಾನದಲ್ಲಿ ಯೂರೋಪ್‌ನಲ್ಲಿನ ಉಳಿದ ದೇಶಗಳಂತೆಯೇ ಬ್ರಿಟನ್‌ ಪ್ರಜೆಗಳ ಸರಾಸರಿ ಎತ್ತರ ಕೂಡಾ ಜಾಸ್ತಿಯಾಗಿದೆ. ಆದರೂ, ಕಳೆದ ಹತ್ತು ವರ್ಷಗಳ ಸಂಕೇತಗಳನ್ನು ಗಮನಿಸುತ್ತಿದ್ದರೆ ಈಗ ಸರಾಸರಿ ಎತ್ತರ ಹೆಚ್ಚಾಗುತ್ತಿಲ್ಲವೆಂದು ಗೊತ್ತಾಗುತ್ತದೆ. ಕಳೆದ ಶತಮಾನದಿಂದ ಪ್ರಪಂಚದಲ್ಲಿ ಅತ್ಯಧಿಕ ಎತ್ತರ ಬೆಳೆದವರು ದಕ್ಷಿಣ ಕೊರಿಯಾದ ಮಹಿಳೆಯರು ಹಾಗೂ ಇರಾನ್‌ ಪುರುಷರು ಮಾತ್ರ.
ಆದರೆ, ನೆದರ್ಲ್ಯಾಂಡ್‌ ಪುರುಷರು ಪ್ರಪಂಚದಲ್ಲೇ ಹೆಚ್ಚು ಎತ್ತರ (೧೮೨.೪ ಸೆಂಟಿಮೀಟರ್‌) ಇರುತ್ತಾರೆ. ಮತ್ತೊಂದೆಡೆ ಗ್ವಾಟೆಮಾಲಾ ಮಹಿಳೆಯರು ಪ್ರಪಂಚದಲ್ಲಿಯೇ ಅತ್ಯಂತ ಕುಳ್ಳಗೆ (೧೪೦ ಸೆಂಟಿಮೀಟರ್‌) ಇರುತ್ತಾರೆ.

 

Share Post