CrimeInternationalNational

307 ಪುರಾತನ ವಸ್ತುಗಳನ್ನು ಭಾರತಕ್ಕೆ ಹಿಂತಿರುಗಿಸಿದ ಅಮೆರಿಕ

ನ್ಯೂಯಾರ್ಕ್; ಭಾರತದಿಂದ ಅಕ್ರಮವಾಗಿ ಸಾಗಿಸಲಾಗಿದ್ದು 33 ಕೋಟಿ ರೂಪಾಯಿ ಮೌಲ್ಯದ 307 ಪುರಾತನ ವಸ್ತುಗಳನ್ನು ಅಮೆರಿಕ ಭಾರತಕ್ಕೆ ವಾಪಸ್‌ ನೀಡಿದೆ. 15 ವರ್ಷಗಳಿಂದ ತನಿಖೆ ನಡೆಸಿದ ನಂತರ ಈ ವಸ್ತುಗಳನ್ನು ಪತ್ತೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಈ ಪುರಾತನ ವಸ್ತುಗಳನ್ನು ಭಾರತದ ವಿವಿಧ ಕಡೆಗಳಲ್ಲಿ ಕಳವು ಮಾಡಲಾಗಿತ್ತು. ನಂತರ ಅವುಗಳನ್ನು ಅತ್ಯಾಧುನಿಕ ಕಳ್ಳಸಾಗಣೆ ಜಾಲದ ಮೂಲಕ ಅಮೆರಿಕಕ್ಕೆ ಸಾಗಣೆ ಮಾಡಲಾಗಿತ್ತು. ಸಿಕ್ಕ ವಸ್ತುಗಳಲ್ಲಿ ಮಾರ್ಬಲ್‌ನಿಂದ ತಯಾರಿಸಿದ 12-13ನೇ ಶತಮಾನದ ಕಮಾನು ಕೂಡಾ ಸೇರಿದ್ದು, ಅದು ಅತಿಹೆಚ್ಚು ಬೆಲೆ ಬಾಳುವಂತಹದ್ದು ಎಂದು ತಿಳಿದು ಬಂದಿದೆ. ಸುಭಾಷ್‌ ಕಪೂರ್‌ ಎಂಬುವವರಿಂದ ಈ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Share Post