CrimeNationalPolitics

ಜಯಲಲಿತಾ ಸಾವಿಗೆ ಆಪ್ತೆ ಶಶಿಕಲಾ ಕಾರಣ; ಆಯೋಗದ ವರದಿ

ಚೆನೈ; ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆಗೆ ಆಯೋಗ ಒಂದನ್ನು ತಮಿಳುನಾಡು ಸರ್ಕಾರ ರಚನೆ ಮಾಡಿತ್ತು. ಈಗ ಆಯೋಗ ವರದಿ ಸಿದ್ಧ ಮಾಡಿದ್ದು, ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಅದರಲ್ಲಿ ಜಯಲಲಿತಾ ಆಪ್ತೆ ಶಶಿಕಲಾ ಅವರೇ ಜಯಲಲಿತಾ ಸಾವಿಗೆ ಕಾರಣ ಎಂದು ನ್ಯಾ. ಆರುಮುಗಸ್ವಾಮಿ ಆಯೋಗ ಉಲ್ಲೇಖ ಮಾಡಿದೆ.

ನ್ಯಾ. ಆರುಮುಗಸ್ವಾಮಿ ಆಯೋಗ ಸಲ್ಲಿಸಿದ 608 ಪುಟಗಳ ವರದಿಯನ್ನು ಇಂದು ತಮಿಳುನಾಡಿದ ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು. ಈ ಸಮಿತಿ ಹೇಳುವ ಪ್ರಕಾರ ಜಯಲಲಿತಾ ಸಾವಿನಲ್ಲಿ  ವಿ.ಕೆ ಶಶಿಕಲಾ, ವೈದ್ಯ ಶಿವಕುಮಾರ್, ಮಾಜಿ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್ ಹಾಗೂ ಮಾಜಿ ಆರೋಗ್ಯ ಸಚಿವ ಸಿ.ವಿಜಯಭಾಸ್ಕರ್ ತಪ್ಪಿತಸ್ಥರು. ಅವರ ವಿರುದ್ಧ ತನಿಖೆ ನಡೆಯಬೇಕೆಂದು ಆಯೋಗ ತಿಳಿಸಿದೆ.

ನ್ಯಾ. ಎ.ಆರುಮುಗಸ್ವಾಮಿ ಸಮಿತಿ ಕೂಡಾ ಜಯಲಲಿತಾ ಆಸ್ಪತ್ರೆಗೆ ದಾಖಲಾದ ದಿನದಿಂದ ಅವರಿಗೆ ನೀಡಿದ ಎಲ್ಲಾ ಬಗೆಯ ಚಿಕಿತ್ಸೆಗಳ ಬಗ್ಗೆ ಅಧ್ಯಯನ ಮಾಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

Share Post