CrimeNational

ಬೃಹತ್‌ ಡ್ರಗ್‌ ಜಾಲ ಭೇದಿಸಿದ ಎನ್‌ಸಿಬಿ; 120 ಕೋಟಿ ರೂ. ಡ್ರಗ್ಸ್‌ ವಶ

ಮುಂಬೈ; ಎನ್‌ಸಿಬಿ ಅಧಿಕಾರಿಗಳು ಗುಜರಾತ್ ಮತ್ತು ಮುಂಬೈಯಲ್ಲಿ ಡ್ರಗ್ಸ್ ದಂಧೆ ಜಾಲ ಭೇದಿಸಿದ್ದು, 120 ಕೋಟಿ ರೂಪಾಯಿ ಮೌಲ್ಯದ 60 ಕೆ.ಜಿ. ಮೆಫೆಡ್ರೋನ್‌ (ಎಂಡಿ) ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಏರ್ ಇಂಡಿಯಾ ನಿವೃತ್ತ ಪೈಲಟ್ ಸೇರಿದಂತೆ ಆರು ಮಂದಿಯನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಎನ್‌ಸಿಬಿಯ ಉಪ ಮಹಾನಿರ್ದೇಶಕ ಸಂಜಯ್ ಸಿಂಗ್, ಗುಜರಾತ್‌ನ ಜಾಮ್‌ನಗರದ ನೌಕಾ ಗುಪ್ತಚರ ಘಟಕಕ್ಕೆ ದೊರೆತ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಎನ್‌ಸಿಬಿಯ ಕೇಂದ್ರ ಕಚೇರಿ ದೆಹಲಿ ಮತ್ತು ಮುಂಬೈ ಘಟಕದ ಅಧಿಕಾರಿಗಳು ಅಕ್ಟೋಬರ್ 3ರಂದು ಜಾಮ್‌ ನಗರದಲ್ಲಿ ನಡೆಸಿದ ದಾಳಿಯಲ್ಲಿ 10 ಕೆ.ಜಿ ಮೆಫೆಡ್ರೋನ್‌ ವಶಪಡಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮ್‌ನಗರದಿಂದ ಒಬ್ಬ ಮತ್ತು ಮುಂಬೈಯಿಂದ ಮೂವರನ್ನು ಬಂಧಿಸಿದೆ.
ದಕ್ಷಿಣ ಮುಂಬೈನ ಬಂದರು ಪ್ರದೇಶ ಎಸ್‌ಬಿ ರಸ್ತೆಯಲ್ಲಿರುವ ಗೋದಾಮಿನ ಮೇಲೆ ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ 50 ಕೆ.ಜಿ ಮೆಫೆಡ್ರೋನ್‌ ವಶಪಡಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ಡ್ರಗ್ಸ್ ಮಾಫಿಯಾ ಸೂತ್ರಧಾರಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಇದರಲ್ಲಿ ಏರ್ ಇಂಡಿಯಾ ನಿವೃತ್ತ ಪೈಲಟ್ ಸೊಹೈಲ್ ಗಫರ್ ಮಹಿದಾ ಎಂಬಾತ ಸೇರಿದ್ದಾನೆ.

 

 

Share Post