ಎಸ್‌ಡಿಪಿಐ ಒಂದು ರಾಜಕೀಯ ಪಕ್ಷ, ಅದಕ್ಕೆ ಬೇರೆ ಕಾನೂನಿದೆ; ಸಿಎಂ ಬೊಮ್ಮಾಯಿ
ಹಾವೇರಿ; ದೇಶದಲ್ಲಿ ಪಿಎಫ್‌ಐ ನಿಷೇಧ ಮಾಡಲಾಗಿದೆ. ಆದ್ರೆ ಎಸ್‌ಡಿಪಿಐ ಒಂದು ರಾಜಕೀಯ ಪಕ್ಷ. ಅದಕ್ಕೆ ಬೇರೆಯದೇ ಕಾನೂನಿದೆ. ಹೀಗಾಗಿ ಸದ್ಯಕ್ಕೆ ಎಸ್‌ಡಿಪಿಐ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ವಿಪಕ್ಷಗಳು ಈ ಬಗ್ಗೆ ಮಾತನಾಡುತ್ತಿವೆ. ಎಸ್‌ಡಿಪಿಐಯನ್ನು ಯಾಕೆ ನಿಷೇಧ ಮಾಡಿಲ್ಲ ಎಂದು ಕೇಳುತ್ತಿವೆ. ಆದ್ರೆ, ಪ್ರಯೊಂದಕ್ಕೂ ಒಂದೊಂದು ಕಾನೂನಿರುತ್ತದೆ. ಅದರ ಪ್ರಕಾರ ನಡೆಯಬೇಕಾಗುತ್ತದೆ. ರಾಜಕೀಯ ಪಕ್ಷವಾಗಿರುವ ಎಸ್‌ಡಿಪಿಐಗೆ ಬೇರೆ ಕಾನೂನಿದೆ. ಮುಂದಿನ ದಿನಗಳ ಎಸ್‌ಡಿಪಿಐ ನಿಷೇಧದ ಬಗ್ಗೆಯೂ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.