ವಿಜನಗರ ಜಿಲ್ಲೆಯಲ್ಲೂ ಒತ್ತುವರಿ ತೆರವು ಕಾರ್ಯಾಚರಣೆ; ಬೆಳಗ್ಗೆಯೇ ಗರ್ಜಿಸಿದ ಬುಲ್ಡೋಜರ್
ವಿಜಯನಗರ; ಒತ್ತುವರಿ ತೆರವು ಕಾರ್ಯಾಚರಣೆ ಈಗ ಜಿಲ್ಲೆಗಳಿಗೂ ಕಾಲಿಟ್ಟಿದೆ. ಇಂದು ವಿಜನಗರ ಜಿಲ್ಲೆಯಲ್ಲಿ ತೆರವು ಕಾರ್ಯಾಚರಣೆ ಶುರು ಮಾಡಲಾಗಿದೆ. ರಸ್ತೆ ಮೇಲೆ ಮನೆ ಕಟ್ಟಿದವರಿಗೆ ಇಲ್ಲಿನ ತಾಲೂಕು ಆಡಳಿತ ಬಿಗ್ ಶಾಕ್ ನೀಡಿದೆ. ಒಂದು ತಿಂಗಳಿಂದ ಒತ್ತುವರಿ ತೆರವು ಕಾರ್ಯಕ್ಕೆ ನಾಂದಿ ಹಾಡಿರುವ ತಾಲೂಕು ಆಡಳಿತ ಈಗ ಮತ್ತೆ ಬುಲ್ಡೋಜರ್ ಸದ್ದು ಶುರು ಮಾಡಿದೆ.
ಹೊಸಪೇಟೆ ಜಿಲ್ಲಾ ಕೇಂದ್ರ ಸ್ಥಾನವಾದ ಬಳಿಕ ನಗರದ ಸೌಂದರ್ಯ ಹಾಗೂ ನಗರದ ರಸ್ತೆ ಸುಗಮ ಸಂಚಾರಕ್ಕೆ ಹೆಚ್ಚಿನ ಒತ್ತು ನೀಡಲು ಸ್ಥಳೀಯ ಆಡಳಿತ ಮುಂದಾಗಿದೆ. ಈ ಕಾರಣ ತಮ್ಮ ಸ್ವಂತ ಜಾಗದ ಜೊತೆಗೆ ಸರ್ಕಾರಿ ಜಾಗದಲ್ಲಿ ಮೆಟ್ಟಿಲು, ಕಾಂಪೌಂಡ್ ಕಟ್ಟಿರುವ ಮನೆಗಳಿಗೂ ಶಾಕ್ ನೀಡಿದ್ದಾರೆ. ಅವುಗಳ ತೆರವಿಗೆ ನೋಟಿಸ್ ಜಾರಿ ಮಾಡಿರೋ ತಾಲೂಕು ಕಚೇರಿ 7 ದಿನಗಳ ಒಳಗೆ ಒತ್ತುವರಿ ಮಾಡಿರೋ ಜಾಗ ಬಿಟ್ಟುಕೊಡುವಂತೆ ಆದೇಶಿಸಿದೆ.