BengaluruPolitics

ವಿಧಾನಸೌಧ ಕಾರಿಡಾರ್‌ನಲ್ಲಿ ಸಿದ್ದು, ಬಿಎಸ್‌ವೈ ಭೇಟಿ; ವಯಸ್ಸಾಗೋಯ್ತಲ್ಲ ನಮ್ಗೆ..!

ಬೆಂಗಳೂರು; ವಿಧಾನಸೌಧದ ಕಾರಿಡಾರಿನಲ್ಲಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅಚಾಕನಕ್ಕಾಗಿ ಎದುರಾಗಿದ್ದು, ಇಬ್ಬರೂ ನಗೆ ಚಟಾಕಿ ಹಾರಿಸಿದ್ದಾರೆ. ಯಡಿಯೂರಪ್ಪ ಅವರು ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಎದುರಾಗಿದ್ದಾರೆ. ಈ ವೇಳೆ ಏನು ನೀವು ಕೌನ್ಸಿಲ್‌ಗೆ ಹೋಗುತ್ತಿದ್ದೀರಾ ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ನಕ್ಕು, ಯಡಿಯೂರಪ್ಪ ಅವರೇ ನಮ್ಗೆ ವಯಸ್ಸಾಗೋಯ್ತಲ್ಲ. ನೀವೂ ಕೌನ್ಸಿಲ್‌ಗೆ ಹೋಗಲು ಆಗಲ್ಲ, ನಾನೂ ಹೋಗಲು ಆಗಲ್ಲ ಎಂದು ಹೇಳಿದರು. ಈ ವೇಳೆ ಇಬ್ಬರೂ ಮನತುಂಬಿ ನಕ್ಕಿದರು.

ಅನಂತರ ಮಾಜಿ ಸಿಎಂ ಕುಮಾರಸ್ವಾಮಿ ಕೂಡಾ ಯಡಿಯೂರಪ್ಪ ಅವರಿಗೆ ಎದುರಾಗಿದ್ದಾರೆ. ಈ ವೇಳೆ ಅವರನ್ನು ಕುಮಾರಸ್ವಾಮಿ ಮಾತನಾಡಿಸಿದ್ದಾರೆ. ಏನ್ ಸರ್ ಚೆನ್ನಾಗಿದ್ದೀರಾ ಎಂದು ಕಾರಿಡಾರ್‌ನಲ್ಲಿ ಬಿಎಸ್‍ವೈ ನಡೆದುಕೊಂಡು ಹೋಗುತ್ತಿದ್ದಾಗ ಕೈಹಿಡಿದುಕೊಂಡು ಪ್ರಶ್ನಿಸಿದ್ದಾರೆ. ಅದಕ್ಕೆ ಬಿಎಸ್‍ವೈ, ನಾನು ಚೆನ್ನಾಗಿದ್ದೇನೆ, ನಿನ್ನೆ ಅಪ್ಪಾಜಿಯವರನ್ನ ನೋಡೋಕೆ ಹೋಗಿದ್ದೆ ಎಂದು ಪ್ರತ್ಯುತ್ತರ ನೀಡಿದ್ದಾರೆ.

Share Post