ತಮ್ಮ ಪ್ರಿಯಕರ ಮರ್ಮಾಂಗ ಕತ್ತರಿಸಿದ ಮಹಿಳೆ; ಆತನ ಸ್ಥಿತಿ ಹೇಗಿದೆ ಗೊತ್ತಾ..?
ಪ್ರಕಾಶಂ (ಆಂಧ್ರಪ್ರದೇಶ); ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆ ತನ್ನ ಪ್ರಿಯಕರನನ್ನು ಕರೆಸಿಕೊಂಡು ಆತನ ಮರ್ಮಾಂಗ ಕತ್ತರಿಸಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೊಂಡಪಿ ಬಳಿಯ ಕೊಳೆಗೇರಿಯಲ್ಲಿ ನಡೆದಿದೆ. ಇಲ್ಲಿ ವಾಸ ಮಾಡುವ 55 ವರ್ಷದ ಮಹಿಳೆ 60 ವರ್ಷದ ವ್ಯಕ್ತಿಯೊಂದಿಗೆ ಹತ್ತು ವರ್ಷಗಳಿಂದ ವಿವಾಹೇತರ ಸಂಬಂಧ ಹೊಂದಿದ್ದಳು. ಆದ್ರೆ ಅದೇನಾಯ್ತೋ ಏನೋ ನಿನ್ನೆ ತನ್ನ ಪ್ರಿಯಕರನನ್ನು ಕರೆಸಿಕೊಂಡಿರುವ ಮಹಿಳೆ, ಮರ್ಮಾಂಗ ಕತ್ತರಿಸಿದ್ದಾಳೆ.
10 ವರ್ಷಗಳಿಂದ ವಿವಾಹೇತರ ಸಂಬಂಧ ಹೊಂದಿದ್ದ ಈ ಜೋಡಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ ಈ ಬಾರಿ ಮನೆಗೆ ಕರೆಸಿಕೊಂಡು ಮಹಿಳೆ ಈ ಕೃತ್ಯವೆಸಗಿದ್ದಾಳೆ. ಇದೀಗ ಸ್ಥಳೀಯರು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಸದ್ಯ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.