ಕುನೋ ಉದ್ಯಾನವನಕ್ಕೆ ಚೀತಾಗಳನ್ನು ಬಿಟ್ಟ ಪ್ರಧಾನಿ ನರೇಂದ್ರ ಮೋದಿ
ಭೋಪಾಲ್; ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ನಮೀಬಿಯಾದಿಂದ ಬಂದ ಎಂಟು ಚೀತಾಗಳನ್ನು ಬಿಡಲಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಉದ್ಯಾನಕ್ಕೆ ಚೀತಾಗಳನ್ನು ಬಿಟ್ಟರು. ಅನಂತರ ಕ್ಯಾಮೆರಾ ಹಿಡಿದ ಪ್ರಧಾನಿ ಮೋದಿ, ಚೀತಾಗಳನ್ನು ಚಿತ್ರಗಳನ್ನು ಸೆರೆ ಹಿಡಿದರು.
ಐದು ವರ್ಷಗಳ ಚೀತಾ ಪ್ರಾಜೆಕ್ಟ್ಗೆ 90 ಕೋಟಿ ವೆಚ್ಚವಾಗಲಿದೆ. 4-5 ವರ್ಷ ವಯಸ್ಸಿನ ಚೀತಾಗಳು ನಮೀಬಿಯಾದಿಂದ ತರಲಾಗಿದೆ. 5 ಹೆಣ್ಣು ಮತ್ತು 3 ಗಂಡು ಚೀತಾಗಳನ್ನು ತರಲಾಗಿದೆ. 8 ಚೀತಾಗಳ ವಯಸ್ಸು 4ರಿಂದ 6 ವರ್ಷವಿದೆ. ಪ್ರತಿ ಚೀತಾಗೆ ಪ್ರತಿದಿನ 2-3 ಕೆಜಿ ಮಾಂಸ ಹಾಕಲಾಗುತ್ತೆ.
740 ಚ.ಕಿ.ಮೀ ಪ್ರದೇಶದ ಕಾಡಿಗೆ ಚೀತಾಗಳು ಎಂಟ್ರಿ ಕೊಟ್ಟಿದ್ದು, ಇದು ಸಂಪೂರ್ಣ ಎಲೆಕ್ಟ್ರಿಕ್ ಫೆನ್ಸಿಂಗ್ ಹೊಂದಿರುವ ಕಾಡಾಗಿದೆ. 8 ಚೀತಾಗಳಿಗೆ 1 ತಿಂಗಳು ಕ್ವಾರಂಟೈನ್ ಸಮಯ ನೀಡುತ್ತದೆ. 5.5 ಕಿ.ಮೀ ಪ್ರದೇಶದಲ್ಲಿ ಚೀತಾಗಳ ಕ್ವಾರಂಟೈನ್ ಮಾಡಲಾಗುತ್ತದೆ. ಹವಾಮಾನಕ್ಕೆ ಹೊಂದಿಕೊಳ್ಳಲು ಕೆಲವು ದಿನ ಬೇಕು. 1952ರಲ್ಲಿ ಈ ಸಂತತಿಯು ಪೂರ್ಣವಾಗಿ ಅಳಿದುಹೋಗಿದ್ದ, ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ಚೀತಾಗಳನ್ನು ತಂದಿದ್ಧಾರೆ. 8500 ಕಿಲೋ ಮೀಟರ್ನಿಂದ ಚೀತಾ ಸ್ಥಳಾಂತರ ಮಾಡಲಾಗಿದೆ.