ಬೆಟ್ಟ ಕುರುಬ ಜಾತಿಯನ್ನು ಎಸ್ಟಿಗೆ ಸೇರಿಸಲು ಕೇಂದ್ರ ಒಪ್ಪಿಗೆ
ನವದೆಹಲಿ; ಕರ್ನಾಟಕದ ಬೆಟ್ಟ ಕುರುಬ ಜಾತಿ ಸೇರಿದಂತೆ 5 ರಾಜ್ಯಗಳ ವಿವಿಧ ಜಾತಿಗಳನ್ನು ಎಸ್ಟಿಗೆ ಸೇರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಕುರುಬ ಜಾತಿಯ ಒಳ ಪಂಗಡ ಬೆಟ್ಟ ಕುರುಬ ಜಾತಿಯನ್ನು ಎಸ್ಟಿ ಮೀಸಲಾತಿ ಪಟ್ಟಿಗೆ ಸೇರ್ಪಡೆಗೆ ಅನುಮೋದನೆ ನೀಡಲಾಯಿತು. ಇನ್ನು ಛತ್ತೀಸ್ಗಢ, ಹಿಮಾಚಲಪ್ರದೇಶ, ತಮಿಳುನಾಡು, ಉತ್ತರಪ್ರದೇಶದ ಜಾತಿಗಳಿಗೂ ಎಸ್ಟಿ ಪಟ್ಟಿಗೆ ಸೇರಿಸಲು ಸಂಪುಟ ಅನುಮತಿ ನೀಡಿದೆ. ಈಗಾಗಲೇ ಕುರುಬ ಸಮುದಾಯದ ಜೇನು ಕುರುಬ, ಕಾಡು ಕುರುಬ ಜಾತಿಗಳು ಎಸ್ಟಿ ಪಟ್ಟಿಯಲ್ಲಿವೆ.