BengaluruCrime

ನೀರು ಕೊಡು ಅಂದಿದ್ದಕ್ಕೆ ರೊಚ್ಚಿಗೆದ್ದ; ಚಾಕುವಿನಿಂದ ಇರಿದು ಕೊಲೆಗೈದ..!

ಬೆಂಗಳೂರು; ಬೆಂಗಳೂರಿನ ಒತ್ತಡ ಜೀವನದಲ್ಲಿ ಜನ ಹೇಗೇಗೆ ಇರ್ತಾರೋ ಊಹಿಸೋಕೆ ಸಾಧ್ಯನೇ ಇಲ್ಲ. ಒಂದು ಮಾತು ಕಡಿಮೆ ಮಾತಾಡಿದ್ರೂ, ಒಂದು ಹೆಚ್ಚಿಗೆ ಮಾತಾಡಿದ್ರೂ ಕಷ್ಟ. ಒಂದೇ ಮಾತು ಕೊಲೆಗೂ ಕಾರಣವಾಗಿಬಿಡಬಹುದು. ಕಳೆದ ರಾತ್ರಿ ಇಂತಹದ್ಧೇ ಒಂದು ಘಟನೆ ನಡೆದಿದೆ.

ಕಳೆದ ರಾತ್ರಿ 11.30ರ ಸಂದರ್ಭದಲ್ಲಿ ಆಟೋ ಚಾಲಕ ಸಿದ್ದಿಕ್‌ ಎಂಬಾತನನ್ನು ಮತ್ತೊಂದು ಆಟೋ ಚಾಲಕ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇದಕ್ಕೆ ಕಾರಣ ಅತ್ಯಂತ ಸಣ್ಣ ವಿಷಯ. ರಾತ್ರಿ ಆಟೋ ಚಾಲಕ ಸಿದ್ಧಿಕ್‌ ಜಾಲಹಳ್ಳಿ ಕ್ರಾಸ್‌ಗೆ ಬಂದಿದ್ದಾನೆ. ಅಲ್ಲಿ ಅಜಯ್‌ ಎಂಬ ಮತ್ತೊಬ್ಬ ಆಟೋ ನಿಲ್ಲಿಸಿಕೊಂಡಿದ್ದ. ಸಿದ್ಧಿಕ್‌ ಅವನನ್ನು ಲೋ ಮಗಾ ನೀರು ಇದ್ರೆ ಕೊಡೋ ಕುಡಿಯೋಕೆ ಎಂದು ಕೇಳಿದ್ದಾನೆ. ಇದ್ರಿಂದ ರೊಚ್ಚಿಗೆದ್ದ ಅಜಯ್‌, ಸಿದ್ಧಿಕ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಏನೋ ಮಗಾ ಅಂತೀಯಾ ಎನ್ನುತ್ತಲೇ ಸಿದ್ದಿಕ್‍ಗೆ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಸಿದ್ದಿಕ್ ನನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಿದ್ದಿಕ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಘಟನೆ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post