ಬಿಜೆಪಿ ಜನಸ್ಪಂದನ ಕಾರ್ಯಕ್ರಮ; ವಿಘ್ನ ಬರದಿರಲು ಸಚಿವ ಸುಧಾಕರ್ರಿಂದ ಹೋಮ
ಬೆಂಗಳೂರು; ಬಿಜೆಪಿ ಜನಸ್ಪಂದನ ಕಾರ್ಯಕ್ರಮಕ್ಕೆ ಎರಡು ಬಾರಿ ವಿಘ್ನ ಎದುರಾಗಿದ್ದರಿಂದ ಮೂರನೇ ಬಾರಿಯಾದರೂ ಕಾರ್ಯಕ್ರಮ ನಡೆಯಲಿ ಅಂತ ಗಣಪತಿ ಹೋಮ ನಡೆಸಲಾಗಿದೆ. ಬಿಜೆಪಿ ಸರ್ಕಾರದ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಲು ಬಿಜೆಪಿ ಸರ್ಕಾರ ತೀರ್ಮಾನಿಸಿತ್ತು. ಆದ್ರೆ ಎರಡು ಬಾರಿ ಈ ಕಾರ್ಯಕ್ರಮ ಮುಂದೂಡಲಾಗಿತ್ತು. ಇದೀಗ ನಾಳೆ ಮತ್ತೆ ಕಾರ್ಯಕ್ರಮ ಫಿಕ್ಸ್ ಮಾಡಲಾಗಿದೆ. ಜನೋತ್ಸವ ಎಂದಿದ್ದ ಕಾರ್ಯಕ್ರಮಕ್ಕೆ ಈಗ ಜನಸ್ಪಂದನ ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ವೇದಿಕೆ ಮೇಲೆ ಗಣಪತಿ ಹೋಮ ನಡೆಸಲಾಗಿದೆ.
ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ವೇದಿಕೆ ನಿರ್ಮಾಣ ಮಾಡಲಾಗಿದೆ. ಈ ವೇದಿಕೆಯಲ್ಲಿ ಗಣಪತಿ ಹೋಮ ನಡೆಸಲಾಗಿದೆ. ಯಾವುದೇ ವಿಘ್ನ ಬಾರದಿರಲಿ ಎಂದು ಈ ಪೂಜೆ ನಡೆಸಲಾಗಿದೆ. ಸಚಿವ ಡಾ.ಕೆ.ಸುಧಾಕರ್ ಈ ಸಂದರ್ಭದಲ್ಲಿ ಹಾಜರಿದ್ದರು.