ಭೀಮಾ ತೀರದಲ್ಲಿ ನಡೀತು ಮತ್ತೊಂದು ರಕ್ತಪಾತ; ತಮ್ಮನಿಂದಲೇ ಅಣ್ಣನ ಕೊಲೆ
ವಿಜಯಪುರ; ಭೀಮಾತೀರದಲ್ಲಿ ಮತ್ತೆ ರಕ್ತಪಾತ ನಡೆದಿದೆ. ಸ್ವಂತ ತಮ್ಮನೇ ತನ್ನ ಅಣ್ಣನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ಈ ಕೃತ್ಯ ಎಸಗಲಾಗಿದೆ.
ರಾಹುಲ್ ವಡ್ಡರ್ ಎಂಬಾತ ತನ್ನ ಒಡಹುಟ್ಟಿದ ಅಣ್ಣ ಜಗ್ಗೇಶ್ ವಡ್ಡರ್ ಅವರನ್ನು ಹತ್ಯೆ ಮಾಡಿದ್ದಾನೆ. ಹಿರಿಯ ಸಹೋದರ ಜಗ್ಗೇಶ್ ದಿನವೂ ಕುಡಿಯಲು ಹಣಕ್ಕಾಗಿ ಪೀಡಿಸುತ್ತಿದ್ದನಂತೆ. ಇದರಿಂದ ಆಕ್ರೋಶಗೊಂಡಿದ್ದ ತಮ್ಮ ರಾಹುಲ್ ವಡ್ಡರ್, ಹರಿತವಾದ ಆಯುಧ ತೆಗೆದುಕೊಂಡು ಅಣ್ಣನನ್ನು ಚುಚ್ಚಿ ಹತ್ಯೆ ಮಾಡಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಚಡಚಣ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.