ಮೈಸೂರು ಮೇಯರ್ ಎಲೆಕ್ಷನ್; ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿ ಅಧಿಕಾರಕ್ಕೆ
ಮೈಸೂರು; ಮೈಸೂರು ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಜಯಬೇರಿ ಬಾರಿಸಿದೆ. ಮೈಸೂರು ಪಾಲಿಕೆಯಲ್ಲಿ ಯಾರಿಗೂ ಬಹುಮತವಿರಲಿಲ್ಲ. ಹೀಗಾಗಿ ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿ ಅಧಿಕಾರ ಹಿಡಿದಿದೆ. ಬಿಜೆಪಿಯ ಶಿವಕುಮಾರ್ ಅವರು 48 ಮತ ಪಡೆದು ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ನಿಂದ ಸೈಯದ್ ಹಸ್ರತ್ ಉಲ್ಲಾ ಅವರನ್ನು ಕಣಕ್ಕಿಳಿಸಲಾಗಿತ್ತು. ಆದ್ರೆ ಅವರಿಗೆ ಕೇವಲ 28 ಮತಗಳ ಮಾತ್ರ ಬಂದವು. ಬಿಜೆಪಿಯವರು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು, ಎಲ್ಲರೂ ಬಿಜೆಪಿ ಅಭ್ಯರ್ಥಿಗೆ ಮತಹಾಕಲು ಸೂಚಿಸಲಾಗಿತ್ತು. ಆದ್ರೆ ಬಿಜೆಪಿಯ ಒಬ್ಬರು ಸದಸ್ಯರು ಮಾತ್ರ ಕಾಂಗ್ರೆಸ್ಗೆ ಅಡ್ಡಮತದಾನ ಮಾಡಿದ್ದಾರೆ. ಉಳಿದಂತೆ ಎಲ್ಲರೂ ಬಿಜೆಪಿಗೆ ಮತ ಚಲಾಯಿಸಿದ್ದು, ಶಿವಕುಮಾರ್ ಸುಲಭವಾಗಿ ಜಯ ಗಳಿಸಿದ್ದಾರೆ.