ಮಳೆಯಿಂದಾದ ಅವಾಂತರ ಬಗೆಹರಿಸಲು ಸೂಕ್ತ ಕ್ರಮ; ಸಿಎಂ
ಬೆಂಗಳೂರು; ಬೆಂಗಳೂರಿನಲ್ಲಿ ವಿಪರೀತ ಮಳೆಯಾಗಿ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ ಮಳೆಹಾನಿ ಏರಿಯಾಗಳಲ್ಲಿ ಸಮಸ್ಯೆ ಬಗೆಹರಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಟಿ.ಕೆ.ಹಳ್ಳಿ ಕುಡಿಯುವ ನೀರಿನ ಯುನಿಟ್ನಲ್ಲಿ ತೊಂದರೆಯಾಗಿದೆ. ನಾನು ಅಲ್ಲಿಗೆ ಭೇಟಿ ನೀಡುತ್ತೇನೆ. bwssb ಸಿಬ್ಬಂದಿ, ಎಂಜಿನಿಯರ್ಗಳನ್ನು ಅಲ್ಲಿಗೆ ಕಳುಹಿಸಲಾಗಿದೆ ಎಂದು ಹೇಳಿದರು.
ಮಹದೇವಪುರ, ಬೊಮ್ಮನಹಳ್ಳಿಯಲ್ಲಿ ಹೆಚ್ಚು ಮಳೆಯಾಗಿದೆ. ಮಹದೇವಪುರ ಹಾಗೂ ಬೊಮ್ಮನಹಳ್ಳಿಗೆ ಎಸ್ಡಿಆರ್ಎಫ್ ತಂಡ ಕಳುಹಿಸಲು ಸೂಚನೆ ನೀಡಿದ್ದೇನೆ ಎಂದು ಸಿಎಂ ಇದೇ ವೇಳೆ ತಿಳಿಸಿದರು. ಮಂಡ್ಯದಲ್ಲಿ ಕಾವೇರಿ ಜಲಮಂಡಲಿ ಜಲಾವೃತವಾಗಿದ್ದು, ಕಾವೇರಿ ಜಲಮಂಡಲಿಯಿಂದ ನೀರು ಹೊರಹಾಕಲಾಗುತ್ತಿದೆ. ಮಧ್ಯಾಹ್ನದ ವೇಳೆಗೆ ಬಹುತೇಕ ನೀರು ಹೊರಹಾಕಲಾಗುತ್ತಿದೆ. ಸಂಜೆಯೊಳಗೆ ಸಮಸ್ಯೆ ಬಗೆಹರಿಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.