CrimeDistricts

ಮುರುಘಾ ಶ್ರೀಗೆ ಸೆ.14ರವರೆಗೆ ನ್ಯಾಯಾಂಗ ಬಂಧನ

ಚಿತ್ರದುರ್ಗ; ಮಠ ಹಾಸ್ಟೆಲ್‌ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಶಿವಮೂರ್ತಿ ಶರಣರಿಗೆ ಚಿತ್ರದುರ್ಗ ೨ನೇ ಹೆಚ್ಚುವರಿ ನ್ಯಾಯಾಲಯ ಹತ್ತು ದಿನಗಳ ನ್ಯಾಯಾಂಗ ಬಂದನ ವಿಧಿಸಿದೆ. ಪೊಲೀಸ್‌ ಕಸ್ಟಡಿ ಇಂದಿಗೆ ಮುಗಿದ ಹಿನ್ನೆಲೆಯಲ್ಲಿ ಇಂದು ಸ್ವಾಮಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್‌, ಶ್ರೀಗಳನ್ನು ಸೆಪ್ಟೆಂಬರ್‌ ೧೪ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಹೀಗಾಗಿ ಶ್ರೀಗಳು ಇನ್ನೂ ಒಂಬತ್ತು ದಿನಗಳ ಕಾಲ ಜೈಲಿನಲ್ಲಿರಬೇಕಾಗುತ್ತದೆ.

ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಶ್ರೀಗಳ ಮೇಲಿದೆ. ಈ ಸಂಬಂಧ ಪೋಕ್ಸೋ ಹಾಗೂ ಅಟ್ರಾಸಿಟಿ ಕಾಯ್ದೆಯಡಿ ಶ್ರೀಗಳ ವಿರುದ್ಧ ಕೇಸ್‌ ದಾಖಲಾಗಿದೆ. ನಾಲ್ಕು ದಿನಗಳ ಹಿಂದೆ ಶ್ರೀಗಳನ್ನು ಬಂಧಿಸಲಾಗಿದ್ದು, ಪ್ರಕರಣದ ವಿಚಾರಣೆಗಳನ್ನು ತೀವ್ರಗೊಳಸಲಾಗಿದೆ.

Share Post