CrimeDistricts

ಮುರುಘಾ ಶ್ರೀಗಳ ವಿರುದ್ಧದ ಕೇಸ್‌; ಲೇಡಿ ವಾರ್ಡನ್‌ ಅರೆಸ್ಟ್‌

ಚಿತ್ರದುರ್ಗ; ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಕೇಸ್‌ನ ಎರಡನೇ ಆರೋಪಿ ಲೇಡಿ ವಾರ್ಡನ್‌ರನ್ನು ಕೂಡಾ ಬಂಧಿಸಲಾಗಿದೆ. ಇದರಿಂದಾಗಿ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದಂತಾಗಿದೆ.

ಆರೋಪಿ ಲೇಡಿ ವಾರ್ಡನ್‌ರನ್ನು ಚಿತ್ರದುರ್ಗ ಪೊಲೀಸರು ನಿನ್ನೆ ವಶಕ್ಕೆ ಪಡೆದಿದ್ದರು. ಹಲವು ಗಂಟೆಗಳ ಕಾಲ ತೀವ್ರ ವಿಚಾರಣೆಗೊಳಪಡಿಸಿದ್ದರು. ಇದೀಗ ಅವರನ್ನು ಬಂಧಿಸಲಾಗಿದೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. ಅನಂತರ ಲೇಡಿ ವಾರ್ಡನ್‌ರನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. ಮುರುಘಾ ಶ್ರೀಗಳ ವಿರುದ್ಧ ಕೇಸ್‌ ದಾಖಲಿಸಿರುವ ಇಬ್ಬರು ವಿದ್ಯಾರ್ಥಿನಿಯರು, ಲೇಡಿ ವಾರ್ಡನ್‌ ವಿರುದ್ಧ ದೂರು ದಾಖಲಿಸಿದ್ದರು. ಲೇಡಿ ವಾರ್ಡನ್‌ ಅವರೇ ನಮ್ಮನ್ನು ಬಲವಂತವಾಗಿ ಸ್ವಾಮೀಜಿ ಬೆಡ್‌ ರೂಮ್‌ಗೆ ಕಳುಹಿಸುತ್ತಿದ್ದರು ಎಂದು ವಿದ್ಯಾರ್ಥಿನಿಯರು ದೂರಿದ್ದರು.

Share Post