ವಿವಾದಿತ ಸಿನಿಮಾ ವಿಮರ್ಶಕ ಕಮಾಲ್ ಅರೆಸ್ಟ್
ಮುಂಬೈ; ಸದಾ ವಿವಾದಗಳ ಮೂಲಕವೇ ಹೆಸರಾಗಿದ್ದ ಬಾಲಿವುಡ್ ನಟ, ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. 2020ರಲ್ಲಿ ರಾಹುಲ್ ಕನ್ವಾಲ್ ಎನ್ನುವವರ ವಿರುದ್ಧ ದ್ವೆಷಪೂರ್ಣ ಟ್ವಿಟ್ ಮಾಡಿದ್ದರು ಎನ್ನುವ ಕಾರಣಕ್ಕಾಗಿ ಕಮಾಲ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಶಿವಸೇನೆ ಪಕ್ಷದ ಕಾರ್ಯಕರ್ತ ರಾಹುಲ್ ಕನ್ವಾಲ್ ಎಂಬುವರು ಇಲ್ಲಿನ ಮಲಾಡ್ ಪೊಲೀಸರಿಗೆ ದೂರು ನೀಡಿದ್ದರು. 2020ರಲ್ಲೇ ದೂರು ದಾಖಲಾಗಿತ್ತು. ಆದ್ರೆ ಕಮಾಲ್ ಎರಡು ವರ್ಷಗಳಿಂದ ಭಾರತದಲ್ಲಿ ಅವರು ನೆಲೆಸಿರಲಿಲ್ಲ. ಇಂದು ಅವರು ಭಾರತಕ್ಕೆ ಬರುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ. ಕಮಾಲ್ ಖಾನ್ ಹಲವು ಸಲ ವಿವಾದಿತ ಟ್ವೀಟ್ ಮಾಡುವ ಮೂಲಕ ಸುದ್ದಿಯಾಗಿದ್ದರು. ಕೆ.ಜಿ.ಎಫ್–2, ಆರ್ಆರ್ಆರ್ ಸಿನಿಮಾಗಳನ್ನು ಟೀಕೆ ಮಾಡಿ ಟ್ವೀಟ್ ಮಾಡಿದ್ದರು. ಹಾಗೇ ದಿವಂಗತ ನಟರಾದ ರಿಷಿ ಕಪೂರ್ ಹಾಗೂ ಇರ್ಫಾನ್ ಖಾನ್ ಅವರನ್ನು ಟೀಕಿಸಿ ಟ್ವೀಟ್ ಮಾಡಿದ್ದರು. ಎರಡು ಸಲ ಅವರನ್ನು ಟ್ವಿಟರ್ ಕಂಪನಿ ಬ್ಯಾನ್ ಮಾಡಿತ್ತು.