Bengaluru

ಮುರುಘಾ ಶರಣರ ವಿರುದ್ಧ ಕೇಸ್‌ನ ಸತ್ಯಾಸತ್ಯತೆ ತನಿಖೆಗೆ ನಂತರ ಗೊತ್ತಾಗುತ್ತೆ; ಸಿಎಂ

ಬೆಂಗಳೂರು; ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೊ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದ ಸತ್ಯಾಂಶ ತನಿಖೆಯ ನಂತರ ಹೊರಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಪ್ರಕರಣದ ತನಿಖೆಯಲ್ಲಿ ಪೊಲೀಸರು ಸಂಪೂರ್ಣ ಸ್ವತಂತ್ರರು. ತನಿಖೆಯ ಬಳಿಕ ಸತ್ಯ ಏನೆಂಬುದು ಹೊರಬರಲಿದೆ ಎಂದರು.

ರಾಜ್ಯದ ಪ್ರತಿಷ್ಠಿತ ಮಠದ ಶ್ರೀಗಳ ವಿರುದ್ಧ ಕೇಳಿಬಂದಿರುವ ಆರೋಪವಿದು. ಇದೊಂದು ಪ್ರಮುಖ ಪ್ರಕರಣ. ಪೋಕ್ಸೊ ಪ್ರಕರಣ ದಾಖಲಾಗುವುದರ ಜತೆಯಲ್ಲೇ ಚಿತ್ರದುರ್ಗದಲ್ಲಿ ಅಪಹರಣ ಪ್ರಕರಣವೂ ದಾಖಲಾಗಿದೆ. ಎರಡೂ ಪ್ರಕರಣಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಾವು ಪ್ರಕರಣದ ಕುರಿತು ಮಾತನಾಡುವುದು, ವ್ಯಾಖ್ಯಾನ ಮಾಡುವುದು ತನಿಖೆಯ ದೃಷ್ಟಿಯಿಂದ ಸರಿಯಲ್ಲ ಎಂದು ಹೇಳಿದರು.

Share Post