CrimeInternational

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬಂಧನ ಸಾಧ್ಯತೆ

ಇಸ್ಲಾಮಾಬಾದ್ ; ಪಾಕಿಸ್ತಾನದ  ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದು ತಿಳಿಯುತ್ತಿದ್ದಂತೆ ದೇಶಾದ್ಯಂತ ಪ್ರತಿಭಟನೆ ನಡೆಸುವಂತೆ ಪಿಟಿಐ ತನ್ನ ಕಾರ್ಯಕರ್ತರಿಗೆ ಕರೆ ನೀಡಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್​ನ ಸೆಷನ್ಸ್​ ನ್ಯಾಯಾಧೀಶ ಝೇಬಾ ಚೌಧರಿ ಅವರನ್ನು ಬೆದರಿಸಿದ ಆರೋಪವನ್ನು ಇಮ್ರಾನ್‌ ಖಾನ್‌ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ಸದ್ದಾರ್ ನ್ಯಾಯಾಧೀಶ ಅಲಿ ಜಾವೇದ್ ಭಯೋತ್ಪಾದನೆಯ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಇಮ್ರಾನ್ ಬಂಧಿಸುವ ಸಾಧ್ಯತೆಗಳಿವೆ.

ಎರಡು ದಿನದ ಹಿಂದೆ ಇಮ್ರಾನ್‌ ಖಾನ್‌ ಅವರು ಎಫ್​9 ಪಾರ್ಕ್​ನಲ್ಲಿ ಪಿಟಿಐ ರ್ಯಾಲಿಯನ್ನುದ್ದೇಶಿಸಿ ಭಾಷಣ ಮಾಡಿದ್ದರು. ಇದರ ನಂತರ ಅಂದು ರಾತ್ರಿ 10 ಗಂಟೆ ಸುಮಾರಿಗೆ ಮಾರ್ಗಲ್ಲಾ ಪೊಲೀಸ್ ಠಾಣೆಯಲ್ಲಿ ಇಮ್ರಾನ್ ವಿರುದ್ಧ ಎಫ್​ಐಆರ್ ದಾಖಲಿಸಲಾಗಿತ್ತು. ಪ್ರತಿಭಟನೆ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಅವರ ಬನಿ ಗಾಲಾ ನಿವಾಸಕ್ಕೆ ಹೋಗುವ ಮಾರ್ಗಗಳನ್ನು ಪೊಲೀಸರು ಬಂದ್ ಮಾಡಲಾಗಿದೆ.  ಅನಧಿಕೃತ ವ್ಯಕ್ತಿಗಳು ಈ ಮಾರ್ಗಗಳ ಮೂಲಕ ಪ್ರಯಾಣಿಸುವುದನ್ನು ನಿಷೇಧಿಸಿದ್ದಾರೆ ಎಂದು ವರದಿಯಾಗಿದೆ. ಇಮ್ರಾನ್ ನಿವಾಸಕ್ಕೆ ಹೋಗುವ ಮಾರ್ಗಗಳನ್ನು ಮುಳ್ಳುತಂತಿ ಹಾಕಿ ಬಂದ್ ಮಾಡಲಾಗಿದ್ದು, ಫ್ರಂಟಿಯರ್ ಕಾರ್ಪ್ಸ್ (FC) ನ ದೊಡ್ಡ ತುಕಡಿಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ಇಮ್ರಾನ್ ಖಾನ್ ಚೌಕ್‌ನ ಬೀದಿ ದೀಪಗಳನ್ನು ಕೂಡ ಬಂದ್ ಮಾಡಲಾಗಿದೆ ಎಂದು ಪಾಕಿಸ್ತಾನದ ಪ್ರಮುಖ ಮಾಧ್ಯಮವೊಂದು ಹೇಳಿದೆ.

Share Post