Crime

ಅಲ್‌ಖೈದಾ ಜೊತೆ ನಂಟು ಆರೋಪ; ಇಬ್ಬರು ಇಮಾಮ್‌ಗಳ ಅರೆಸ್ಟ್‌

ಗೋಲ್ಪಾರಾ; ಅಲ್ ಖೈದಾ ಮತ್ತು ಅನ್ಸರುಲ್ಲಾ ಬಾಂಗ್ಲಾ ಟೀಂ ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಇಬ್ಬರು ಶಂಕಿತ ಉಗ್ರರನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ.

ಟಿಂಕುನಿಯಾ ಶಾಂತಿಪುರ ಮಸೀದಿಯ ಇಮಾಮ್  ಅಬ್ದುಸ್ ಸುಭಾನ್ ಮತ್ತು ತಿಲಪಾರಾ ನಾತುನ್ ಮಸೀದಿಯ ಇಮಾಮ್ ಜಲಾಲುದ್ದೀನ್ ಶೇಖ್ ಬಂಧಿತ ಶಂಕಿತ ಉಗ್ರರು. ಈ ಇಬ್ಬರೂ ಉಗ್ರ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

   ಶಂಕಿತ ಉಗ್ರರ ಬಂಧನ ಬಳಿಕ ಅವರ ಮನೆಗಳನ್ನು ಶೋಧ ನಡೆಸಿದಾಗ ಅಲ್ ಖೈದಾ, ಜಿಹಾದಿಗೆ ಸಂಬಂಧಿತ ವಸ್ತುಗಳು, ಪೋಸ್ಟರ್‌ಗಳು, ಪುಸ್ತಕಗಳು ಮತ್ತು ಇತರ ದಾಖಲೆಗಳ ಜೊತೆಗೆ ಮೊಬೈಲ್ ಫೋನ್‌ಗಳು, ವಿವಿಧ ಮೊಬೈಲ್​ ಸಿಮ್ ಮತ್ತು ಐಡಿ ಕಾರ್ಡ್‌ಗಳು ಪತ್ತೆಯಾಗಿವೆ.

ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಭಯೋತ್ಪಾದಕರಿಗೆ ಬಾಹ್ಯ ನೆರವು ನೀಡಿರುವುದು ತನಿಖೆಯ ವೇಳೆ ತಿಳಿದು ಬಂದಿದೆ. ಇದಲ್ಲದೇ, ಅಕ್ರಮವಾಗಿ ದೇಶಕ್ಕೆ ಬಂದ ಬಾಂಗ್ಲಾ ಪ್ರಜೆಗಳಗೂ ಆಶ್ರಯ ನೀಡಿದ್ದಾರೆ ಎಂದು ಹೇಳಲಾಗಿದೆ.

Share Post