Cinema

ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಹುಭಾಷಾ ನಟಿ ನಮಿತಾ

ಮುಂಬೈ: ಬಹುಭಾಷಾ ನಟಿ ನಮಿತಾ ಅವರು ಕೃಷ್ಣ ಜನ್ಮಾಷ್ಟಮಿ ದಿನವೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ನಮಿತಾ ಅವರೇ ಸೋಷಿಯಲ್ ಮೀಡಿಯಾದ ಮೂಲಕ ಬಹಿರಂಗ ಪಡಿಸಿದ್ದಾರೆ. ಪತಿಯ ಜೊತೆ ಅವಳಿ ಮಕ್ಕಳ ಪೋಟೋವನ್ನು ನಮಿತಾ ಅವರು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ನಮಿತಾ ಅವರು ಚೆನ್ನೈನ ವೀರೇಂದ್ರ ಚೌಧರಿ ಜೊತೆ  ಮದುವೆಯಾಗಿದ್ದರು. ಇತ್ತೀಚೆಗಷ್ಟೇ ನಮಿತಾ ಅವರು ಬೇಬಿ ಪಂಪ್ ಫೋಟೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದರು. ನಮಿತಾ ಮೂಲತಃ ಗುಜರಾತ್ ಮೂಲದವರಾಗಿದ್ದು, ತೆಲುಗು ಚಿತ್ರರಂಗದಲ್ಲಿ ಹೆಚ್ಚು ಫೇಮಸ್‌ ಆಗಿದ್ದರು. ಕನ್ನಡದಲ್ಲೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

 

Share Post