ಕಾರಿಗೆ ಡಿಕ್ಕಿ ಹೊಡೆದು 500 ಮೀಟರ್ ಎಳೆದೊಯ್ದ ಟ್ರಕ್..!
ಲಕ್ನೋ; ಸಮಾಜವಾದಿ ಪಕ್ಷದ ನಾಯಕರೊಬ್ಬರ ಕಾರಿಗೆ ಟ್ರಕ್ ಒಂದು ಡಿಕ್ಕಿ ಹೊಡೆದಿದ್ದು, ಅದು ಕಾರನ್ನು 500 ಮೀಟರ್ ವರೆಗೂ ಎಳೆದೊಯ್ದಿದೆ. ಉತ್ತರ ಪ್ರದೇಶದ ಮೈನ್ಪುರಿ ನಗರದಲ್ಲಿ ಈ ಘಟನೆ ನಡೆದಿದೆ.
ಅಪಘಾತಕ್ಕೀಡಾದ ಕಾರು ಸಮಾಜವಾದಿ ಪಕ್ಷದ ನಾಯಕ ದೇವೇಂದ್ರ ಸಿಂಗ್ ಯಾದವ್ ಅವರದ್ದು. ದೇವೇಂದ್ರ ಯಾದವ್ ಅವರು ಮೈನ್ಪುರಿಯ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದಾರೆ. ಪಕ್ಷದ ಕಚೇರಿಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
ಈ ಅಪಘಾತದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದೇವೇಂದ್ರ ಯಾದವ್ ಅವರ ಕಾರನ್ನು ನಿಲ್ಲಿಸುವ ಮೊದಲು ಲಾರಿಯೊಂದು ಬಂದು ಸುಮಾರು 500 ಮೀ. ದೂರದವರೆಗೆ ಎಳೆದೊಯ್ದಿದೆ. ಕಾರು ನಿಂತ ತಕ್ಷಣ ರಸ್ತೆಯಲ್ಲಿದ್ದ ಹಲವರು ಸ್ಥಳಕ್ಕೆ ಧಾವಿಸಿ ಸಮಾಜವಾದಿ ಪಕ್ಷದ ನಾಯಕನನ್ನು ರಕ್ಷಿಸಲು ಯತ್ನಿಸಿದರು.
ಘಟನೆಗೆ ಸಂಬಂಧಿಸಿ ಆರೋಪಿ ಟ್ರಕ್ ಚಾಲಕನನ್ನು ಬಂಧಿಸಲಾಗಿದ್ದು, ತೀವ್ರ ವಿಚಾರಣೆಗೊಳಪಡಿಸಲಾಗಿದೆ.