BengaluruPolitics

ಸಿದ್ದರಾಮೋತ್ಸವ; ಮುಜುಗರ ಆಗದಂತೆ ನೋಡಿಕೊಂಡ ರಾಹುಲ್‌, ಡಿಕೆಶಿ

ಬೆಂಗಳೂರು; ಸಿದ್ದರಾಮಯ್ಯ ಅವರ ಜನ್ಮದಿನದ ಕಾರ್ಯಕ್ರಮ ದಾವಣಗೆರೆಯಲ್ಲಿ ಅದ್ದೂರಿಯಾಗಿ ನಡೆಯಿತು.. ಸೇರಿದ್ದ ಲಕ್ಷ ಲಕ್ಷ ಜನ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.. ಇದನ್ನು ಸಿದ್ದರಾಮಯ್ಯ ಅವರ ಶೋ ಎಂದೇ ಬಿಂಬಿಸಲಾಗಿತ್ತು.. ಆದ್ರೆ ಸಮಾರಂಭ ಮುಕ್ತಾಯವಾಗುವ ವೇಳೆಗೆ ಅದು ಒಗ್ಗಟ್ಟಿನ ಪ್ರದರ್ಶನದ ಸಮಾರಂಭವಾಗಿತ್ತು ಅನ್ನೋದು ಎಲ್ಲರಿಗೂ ಮನವರಿಕೆಯಾಗಿತ್ತು..

ಸಿದ್ದರಾಮೋತ್ಸವಕ್ಕೆ ಸಿದ್ಧತೆ ಶುರು ಮಾಡಿದಾಗಿನಿಂದ ಜಮೀರ್‌ ಅಹ್ಮದ್‌ ಖಾನ್‌, ಮಹದೇವಪ್ಪರಂತಹ ಹಲವರು ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಸೃಷ್ಟಿಯಾಗಿದೆಯೇನೋ ಎಂದು ಮಾತನಾಡಿಕೊಳ್ಳುವ ರೀತಿಯಲ್ಲಿ ವರ್ತಿಸಿದ್ದರು.. ಕೆಲವರ ಹೇಳಿಕೆಗಳು, ಅವರು ನಡೆದುಕೊಂಡ ರೀತಿ ಎಲ್ಲವೂ ಕಾಂಗ್ರೆಸ್‌ನಲ್ಲಿ ಬಿರುಕುಂಟಾದಂತೆ ಕಾಣುತ್ತಿತ್ತು.. ಆದ್ರೆ, ಅದನ್ನೆಲ್ಲಾ ಸಮಾರಂಭದಲ್ಲಿ ಚೆನ್ನಾಗಿ ನಿಭಾಯಿಸಿದವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ರಾಹುಲ್‌ ಗಾಂಧಿಯವರು..

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವುದಕ್ಕಾಗಿ ಈ ಸಮಾರಂಭ ನಡೆಯುತ್ತಿದೆ ಎಂಬುದು ಎಲ್ಲರ ಮಾತಾಗಿತ್ತು. ಕಾರ್ಯಕ್ರಮದ ಮೊದಲಿಗೆ ಅದೇ ತರದ ಘೋಷಣೆಗಳು ತೇಲಿಬಂದವು.. ರಾಹುಲ್‌ ವೇದಿಕೆಗೆ ಬರುವ ಮೊದಲಿನ ಭಾಷಣಗಳು ಕೂಡಾ ಹಾಗೆಯೇ ಇದ್ದವು.. ಆದ್ರೆ ರಾಹುಲ್‌ ಗಾಂಧಿ ಹಾಗೂ ಡಿ.ಕೆ.ಶಿವಕುಮಾರ್‌ ವೇದಿಕೆ ಹತ್ತುತ್ತಿದ್ದಂತೆ ಪರಿಸ್ಥಿತಿ ಬದಲಾಯಿತು.. ಸಿದ್ದರಾಮೋತ್ಸವದ ವೇದಿಕೆ ಒಗ್ಗಟ್ಟು ಪ್ರದರ್ಶನದ ವೇದಿಕೆಯಂತೆ ಕಂಡುಬಂತು.

ವೇದಿಕೆಯಲ್ಲಿ ಭಾಷಣ ಮಾಡಿದ ರಾಹುಲ್‌ ಗಾಂಧಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಇಬ್ಬರನ್ನೂ ಹೊಗಳಿದರು.. ಸಿದ್ದರಾಮಯ್ಯ ಅವರ ಸರ್ಕಾರದ ಸಾಧನೆಗಳನ್ನು, ಸಿದ್ದರಾಮಯ್ಯ ಅವರ ನಡೆನುಡಿಯನ್ನು ಕೊಂಡಾಡಿದರು.. ಇದರ ನಡುವೆಯೇ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್‌ ಅಧಿಕಾರ ವಹಿಸಿಕೊಂಡ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್‌ ಎಷ್ಟೆಲ್ಲಾ ಸಂಘಟನೆಯಾಗಿದೆ ಎಂಬುದನ್ನೂ ಹೇಳಿದರು.. ಈ ಮೂಲಕ ರಾಹುಲ್‌ ಗಾಂಧಿ ಸಾಮೂಹಿಕ ನಾಯಕತ್ವದ ಮಂತ್ರವನ್ನು ಪರೋಕ್ಷವಾಗಿ ಪಠಿಸಿದರು.

ಇನ್ನು ಡಿ.ಕೆ.ಶಿವಕುಮಾರ್‌ ಅವರು ಭಾಷಣದ ಮೂಲಕ ಸಿದ್ದರಾಮಯ್ಯ ಅವರಿಗೆ ಟಾಂಗ್‌ ಕೊಡ್ತಾರೆ ಎಂದು ಭಾವಿಸಲಾಗಿತ್ತು. ಅವರ ಭಾಷಣದ ವಿವರ ಲೀಕ್‌ ಆಗಿದೆ ಎಂದು ಹೇಳಲಾಗಿತ್ತು.. ಆದ್ರೆ ಪಕ್ಷದ ರಾಜ್ಯಾಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್‌ ಪ್ರಬುದ್ಧರಾಗಿ ನಡೆದುಕೊಂಡರು. ವೇದಿಕೆಯಲ್ಲಿ ಸಿದ್ದರಾಮಯ್ಯ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಅಪ್ಪಿಕೊಂಡು ಶುಭಾಶಯ ಕೋರಿದ್ರು. ಸಿದ್ದರಾಮಯ್ಯ ಅವರ ಕೈ ಮೇಲೆತ್ತಿ ನಾವೆಲ್ಲಾ ಒಂದು ಎಂಬ ಸಂದೇಶವನ್ನು ರವಾನಿಸಿದರು.

ಇನ್ನು ಭಾಷಣದಲ್ಲಿ ಕೂಡಾ ಸಿದ್ದರಾಮಯ್ಯ ಅವರ ಕೊಡಗೆಗಳನ್ನು ಸ್ಮರಿಸಿದರು. ಪಕ್ಷಕ್ಕೆ ಒಗ್ಗಟ್ಟು ಎಷ್ಟು ಮುಖ್ಯ ಅನ್ನೋದನ್ನೂ ತಿಳಿಸಿದರು.. ಡಿ.ಕೆ.ಶಿವಕುಮಾರ್‌ ಕೂಡಾ ಸಾಮೂಹಿಕ ನಾಯಕತ್ವದ ಮಂತ್ರವನ್ನು ಪಠಿಸಿದರು.

ಸಿದ್ದರಾಮಯ್ಯ ಅವರಿಗೆ ಡಿ.ಕೆ.ಶಿವಕುಮಾರ್‌ ಅವರು ಇಂದಿರಾಗಾಂಧಿ ಕುರಿತ ಪುಸ್ತಕವನ್ನು ಕೊಟ್ಟರು. ಶಾಲು ಹೊದಿಸಿದರು. ಇದೇ ವೇಳೆ ರಾಹುಲ್‌ ಗಾಂಧಿಯವರು ಸಿದ್ದರಾಮಯ್ಯ ಅವರನ್ನು ತಬ್ಬಿಕೊಳ್ಳುವಂತೆ ಡಿ.ಕೆ.ಶಿವಕುಮಾರ್‌ ಅವರಿಗೆ ಸೂಚಿಸಿದರು. ಡಿ.ಕೆ.ಶಿವಕುಮಾರ್‌ ಖುಷಿಯಿಂದ ಸಿದ್ದರಾಮಯ್ಯ ಅವರನ್ನು ತಬ್ಬಿಕೊಂಡರು.. ರಾಹುಲ್‌ ಸೂಚಿಸಿದ್ದರಿಂದ ಡಿ.ಕೆ.ಶಿವಕುಮಾರ್‌ ತಬ್ಬಿಕೊಂಡರು ಎಂದು ಕೆಲವರು ಹೇಳುತ್ತಿದ್ದಾರಾದರೂ, ಇಲ್ಲಿ ಒಗ್ಗಟ್ಟಿನ ಪ್ರದರ್ಶನಕ್ಕೆ ಪಕ್ಷಕ್ಕೆ ಡ್ಯಾಮೇಜ್‌ ಆಗದ ರೀತಿಯಲ್ಲಿ ಡಿ.ಕೆ.ಶಿವಕುಮಾರ್‌ ಹಾಗೂ ರಾಹುಲ್‌ ಗಾಂಧಿಯವರು ಎಷ್ಟು ಚೆನ್ನಾಗಿ ನಡೆದುಕೊಂಡರು ಅನ್ನೋದು ಯಾರ ಗಮನಕ್ಕೂ ಬಂದಂತೆ ಕಾಣುತ್ತಿಲ್ಲ..

ಇಷ್ಟೆಲ್ಲಾ ಆದ ಮೇಲೆ ಸಿದ್ದರಾಮಯ್ಯ ಕೂಡಾ ಡಿ.ಕೆ.ಶಿವಕುಮಾರ್‌ ಹಾಗೂ ರಾಹುಲ್‌ ಗಾಂಧಿಯವರನ್ನು ಕೊಂಡಾಡಿದರು.. ನಮ್ಮಲ್ಲಿ ಯಾವುದೇ ಬಿರುಕು ಮೂಡಿಲ್ಲ ಎಂದು ಘಂಟಾಘೋಷವಾಗಿ ಹೇಳಿದ್ರು.

ಕಾಂಗ್ರೆಸ್‌ ನಾಯಕರು ಯಾವಾಗಲೂ ವ್ಯಕ್ತಿಗಿಂತ ಪಕ್ಷವೇ ಮುಖ್ಯ ಎಂದು ಹೇಳುತ್ತಿರುತ್ತಾರೆ.. ನಿನ್ನೆಯ ವೇದಿಕೆಯಲ್ಲಿ ಕೂಡಾ ಅದನ್ನೇ ಪ್ರದರ್ಶಿಸಿದ್ದಾರೆ..

Share Post