National

ವಿಮಾನ ಚಕ್ರದಡಿ ಸಿಲುಕಿದ ಕಾರು; ಕೆಲಕಾಲ ಆತಂಕ

ನವದೆಹಲಿ; ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯಬೇಕಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ. ಇಂಡಿಗೋ ವಿಮಾನದ ಚಕ್ರದಡಿ ಗೋ ಫಸ್ಟ್ ಕಾರ್ ಸಿಲುಕಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು.

   ಇಂಡಿಗೋ ವಿಮಾನ ರನ್‌ವೇ ನಲ್ಲಿ ನಿಂತಿತ್ತು. ಈ ವೇಳೆ ಗೋ ಫಸ್ಟ್ ಕಾರು ಅಲ್ಲಿಗೆ ತೆರಳಿದ್ದು, ವಿಮಾನದಡಿ ಸಿಲುಕಿದೆ. ಸ್ವಲ್ಪದರಲ್ಲೇ ವಿಮಾನದ ಮುಂದಿನ ಚಕ್ರಕ್ಕೆ ಡಿಕ್ಕಿಯಾಗುವುದು ತಪ್ಪಿದೆ. ವಿಮಾನ ನಿಲ್ದಾಣದ ಟರ್ಮಿನಲ್​ ಸ್ಟ್ಯಾಂಡ್​ ಸಂಖ್ಯೆ 201ರಲ್ಲಿ ಈ ಘಟನೆ ಸಂಭವಿಸಿದೆ. ಇದಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ತನಿಖೆಗೆ ಆದೇಶ ನೀಡಿದೆ.

   ಕಾರು ಚಾಲಕನಿಗೆ ಮದ್ಯ ಸೇವನೆಯ ಪರೀಕ್ಷೆ ನಡೆಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನಕ್ಕೆ ಯಾವುದೇ ರೀತಿಯ ಹಾನಿಯಾಗಿಲ್ಲ.
Share Post