National

ಕೇರಳದ ಮತ್ತೊಬ್ಬ ವ್ಯಕ್ತಿಗೆ ಮಂಕಿ ಫಾಕ್ಸ್‌ ದೃಢ

ಕಣ್ಣೂರು; ಕೇರಳದಲ್ಲಿ ಮತ್ತೊಬ್ಬ ವ್ಯಕ್ತಿಗೆ ಮಂಕಿ ಫಾಕ್ಸ್‌ ಇರೋದು ದೃಢಪಟ್ಟಿದೆ. ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬರು ದುಬೈನಿಂದ ಕೇರಳದ ಕಣ್ಣೂರಿಗೆ ಆಗಮಿಸಿದ್ದರು. ಈ ವೇಳೆ ಅವರಲ್ಲಿ ಮಂಕಿಫಾಕ್ಸ್‌ ಲಕ್ಷಣಗಳು ಕಂಡುಬಂದಿದ್ದವು. ಹೀಗಾಗಿ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಇದೀಗ ಅವರಿಗೆ ಮಂಕಿಫಾಕ್ಸ್‌ ಸೋಂಕು ಇರುವುದು ದೃಢಪಟ್ಟಿದೆ.

ಕೆಲ ದೇಶಗಳಲ್ಲಿ ಮಂಕಿಫಾಕ್ಸ್‌ ಸೋಂಕು ಹೆಚ್ಚು ಬಾಧಿಸುತ್ತಿದೆ. ಹೀಗಾಗಿ ಭಾರತದಲ್ಲೂ ಇದು ವಕ್ಕರಿಸಿರುವುದು ಆತಂಕಕ್ಕೆ ಕಾರಣವಾಗಿದೆ.

 

Share Post