ಶಿರಡಿ ಸಾಯಿಬಾಬಾಗೆ ಮೂರೇ ದಿನದಲ್ಲಿ 5.1 ಕೋಟಿ ರೂಪಾಯಿ
ಶಿರಡಿ; ಗುರುಪೂರ್ಣಮೆಗೆ ಶಿರಡಿ ಸಾಯಿಬಾಬಾ ಮಂದಿರಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಈ ವೇಳೆ ಭಕ್ತರು ಭಾರಿ ಪ್ರಮಾಣದ ಕಾಣಿಕೆಯನ್ನು ಶಿರಡಿ ಸಾಯಿಬಾಬಾರ ಹುಂಡಿಗೆ ಅರ್ಪಿಸಿದ್ದಾರೆ. ಮೂರು ದಿನದಲ್ಲಿ ಬರೋಬ್ಬರಿ 5 ಕೋಟಿ 12 ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.
ಗುರು ಪೂರ್ಣಿಮೆ ಅಂಗವಾಗಿ ಶಿರಡಿ ಸಾಯಿಬಾಬಾ ದೇಗುಲದಲ್ಲಿ ಮೂರು ದಿನಗಳ ವಿಶೇಷ ಉತ್ಸವ ಆಚರಣೆ ಮಾಡಲಾಗಿತ್ತು. ಈ ವೇಳೆ ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ಇಲ್ಲಿಗೆ ಶಿರಡಿಗೆ ಭೇಟಿ ನೀಡಿದ್ದರು. ಇವರಿಂದ ಒಟ್ಟು 5 ಕೋಟಿ12 ಲಕ್ಷದ 408 ರೂಪಾಯಿ ಸಂಗ್ರಹವಾಗಿದೆ. ಇದರಲ್ಲಿ 12 ದೇಶಗಳ 19 ಲಕ್ಷ 80 ಸಾವಿರದ 94 ರೂಪಾಯಿ ಮೌಲ್ಯದ ಕರೆನ್ಸಿ ಕೂಡಾ ಇದೆ.
ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಆದರೆ, ಕೋವಿಡ್ನಿಂದಾಗಿ ಕಳೆದ ಎರಡು ವರ್ಷಗಳ ಕಾಲ ಹೆಚ್ಚಿನ ಭಕ್ತರು ಇಲ್ಲಿಗೆ ಆಗಮಿಸಿರಲಿಲ್ಲ. ಇದೀಗ, ಕೋವಿಡ್ ಮೇಲಿನ ಎಲ್ಲ ನಿರ್ಬಂಧ ತೆಗೆದು ಹಾಕಿರುವ ಕಾರಣ ಹೆಚ್ಚಿನ ಭಕ್ತರು ಭೇಟಿ ನೀಡಲು ಶುರು ಮಾಡಿದ್ದಾರೆ.