ಸಹರಾನ್‌ಪುರ್ ಜೈಲಿನ 23 ಕೈದಿಗಳಿಗೆ ಹೆಚ್‌ಐವಿ ಸೋಂಕು..!; ಕಾರಣ ಏನು ಗೊತ್ತಾ..?
ಸಹರಾನ್‌ಪುರ; ಉತ್ತರಪ್ರದೇಶದ ಸಹರಾನ್‌ಪುರ ಜಿಲ್ಲಾ ಕಾರಾಗೃಹದ 23 ಕೈದಿಗಳಿಗೆ ಹೆಚ್‌ಐವಿ ಸೋಂಕು ತಗುಲಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ತಪಾಸಣೆ ವೇಳೆ ಈ ವಿಷಯ ಬೆಳಕಿಗೆ ಬಂದಿದ್ದು, ಇದು ಜೈಲಿನ ಅಧಿಕಾರಿಗಳನ್ನು ಕಂಗೆಡಿಸುವಂತೆ ಮಾಡಿದೆ. ಸೋಂಕಿನ ಮೂಲ ಪತ್ತೆ ಮಾಡಲು ಸೂಚಿಸಲಾಗಿದೆ.
ಜೂನ್ 15 ರಂದು ಸಹರಾನ್‌ಪುರ ಜಿಲ್ಲಾ ಕಾರಾಗೃಹದಲ್ಲಿ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಈ ವೇಳೆ, ಹಲವರಿಗೆ ತಪಾಸಣೆ ನಡೆಸಲಾಗಿದ್ದು, 23 ಕೈದಿಗಳಿಗೆ ಏಡ್ಸ್ ಇರುವುದು ಗೊತ್ತಾಗಿದೆ. ಹೀಗಾಗಿ ಕಾರಾಗೃಹದಲ್ಲಿರುವ ಎಲ್ಲಾ 2200 ಕೈದಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ.
23 ಖೈದಿಗಳಿಗೆ ಹೆಚ್‌ಐವಿ ಪಾಸಿಟಿವ್ ಕಂಡು ಬಂದಿದ್ದರಲ್ಲಿ ಹೆಚ್ಚಿನ ಖೈದಿಗಳು ಬೆಹತ್, ಗಂಗೋಹ್, ನಕುದ್ ಮತ್ತು ದಿಯೋಬಂದ್‌ನಿಂದ ಬಂದವರಾಗಿದ್ದು, ಆರೋಗ್ಯ ಇಲಾಖೆ ಈಗ ಅವರ ಹಿನ್ನೆಲೆಯನ್ನು ಸಂಗ್ರಹಿಸುತ್ತಿದೆ. ಎಚ್‌ಐವಿ ಪಾಸಿಟಿವ್ ಬಂದ 23 ಕೈದಿಗಳ ಪೈಕಿ 6 ಮಂದಿ ಹೊಸಬರಾಗಿದ್ದಾರೆ. ಉಳಿದವರು ಹಳೆಯ ಕೈದಿಗಳು. ಅವರಲ್ಲಿ ಹೆಚ್ಚಿನವರು ಡ್ರಗ್ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.