Districts

ಕಪಿಲಾ ನದಿಯಲ್ಲಿ ಪ್ರವಾಹ ಹೆಚ್ಚಳ; ಪರಶುರಾಮ ದೇಗುಲಕ್ಕೆ ಜಲ ದಿಗ್ಬಂಧನ

ಮೈಸೂರು; ಭಾರಿ ಮಳೆಯಿಂದಾಗಿ ಕಪಿಲ ನದಿಯಲ್ಲಿ ಪ್ರವಾಹ ಉಂಟಾಗಿದೆ. ಇದರಿಂದಾಗಿ ನಂಜನಗೂಡಿನ ಪರಶುರಾಮ ದೇವಾಲಯಕ್ಕೆ ಜಲ ದಿಗ್ಬಂಧನವಾಗಿದೆ.  ದೇವಾಲಯದ ಸುತ್ತ ನೀರು ಆವರಿಸಿದ್ದು, ಕಪಿಲಾ ನದಿಯ ದಡದ ಸ್ನಾನಘಟ್ಟ, ಮುಡಿಕಟ್ಟೆ, ಅಯ್ಯಪ್ಪ ಸ್ವಾಮಿ ದೇವಾಲಯ ಕೂಡ ಮುಳುಗಡೆಯಾಗಿದೆ.

ಇನ್ನು ನಂಜನಗೂಡು ಪಟ್ಟಣದ ಹಳ್ಳದ ಕೇರಿ ಬಡಾವಣೆಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ.  ನಂಜುಂಡೇಶ್ವರ ದೇವಾಲಯದ ಸಮೀಪದ ತಗ್ಗು ಪ್ರದೇಶದ ತೋಪಿನ ಬೀದಿ, ಹಳ್ಳದಕೇರಿ, ಒಕ್ಕಲಗೇರಿ ಬಡಾವಣೆಗೂ ಪ್ರವಾಹದ ನೀರು ನುಗ್ಗಿದೆ. ಹಳ್ಳದಕೇರಿ ಬಡಾವಣೆಯಲ್ಲಿ ಮನೆಯಲ್ಲಿರುವ ಸಾಮಗ್ರಿಗಳನ್ನು ಮನೆಯವರು ಬೇರೆಡೆ ಸ್ಥಳಾಂತರಿಸುತ್ತಿದ್ದಾರೆ.

ಕಪಿಲಾ ನದಿಯ ಅಂಚಿಗೆ ಸಾರ್ವಜನಿಕರು ಮತ್ತು ಭಕ್ತರು ತೆರಳದಂತೆ ಖಾಕಿ ಕಾವಲು ಹಾಕಲಾಗಿದೆ. ಕಪಿಲಾ ನದಿ ಮತ್ತು ಪರಶುರಾಮ ದೇವಾಲಯದ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ ದಿಗ್ಬಂಧನ ವಿಧಿಸಲಾಗಿದೆ. ಕಪಿಲ ನದಿಯ ಸುತ್ತಮುತ್ತಲಿನ ಅಂಗಡಿ ಮಳಿಗೆಗಳನ್ನು ತೆರವು ಮಾಡಲಾಗಿದೆ. ನಂಜನಗೂಡು ತಾಲ್ಲೂಕು ತಹಸೀಲ್ದಾರ್ ಆದೇಶದ ಮೇರೆಗೆ ಅನಧಿಕೃತ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿದ್ದಾರೆ.

Share Post