ಪುರಸಭೆ ಮಾಜಿ ಅಧ್ಯಕ್ಷನ ಭೀಕರ ಹತ್ಯೆ; ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
ಕಲಬುರಗಿ; ಶಹಬಾದ್ ಪುರಸಭೆ ಮಾಜಿ ಅಧ್ಯಕ್ಷನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಶಹಬಾದ್ ಸ್ಟೇಷನ್ ಏರಿಯಾದಲ್ಲಿ ಈ ಕೊಲೆ ನಡೆದಿದ್ದು, ದುಷ್ಕರ್ಮಿಗಳು ಹಾಡಹಗಲೇ ಪುರಸಭೆ ಮಾಜಿ ಅಧ್ಯಕ್ಷ ಗಿರೀಶ್ ಕಂಬಾನೂರ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಮಾರಕಾಸ್ತ್ರಗಳಿಂದ ದಾಳಿ ಮಾಡಿರುವ ದುಷ್ಕರ್ಮಿಗಳು, ಹಾಡಹಗಲೇ ಗಿರೀಶ್ ಕಂಬಾನೂರ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಶಹಬಾದ್ ಈಗ ನಗರಸಭೆಯಾಗಿದ್ದು, ಕೊಲೆಯಾದ ಗಿರೀಶ್ ಕಂಬಾನೂರ್ ಅವರ ಪತ್ನಿಯೇ ಅದಕ್ಕೆ ಅಧ್ಯಕ್ಷೆಯಾಗಿದ್ದಾರೆ. ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. ಎರಡು ವರ್ಷದ ಹಿಂದೆ ಗಿರೀಶ್ ಸಹೋರನನ್ನೂ ಹತ್ಯೆ ಮಾಡಲಾಗಿತ್ತು.