ಕಾವೇರಿಯಲ್ಲಿ ನದಿಯ ನಡುವೆ ಸಿಲುಕಿದ ಬೋಟ್; ಹತ್ತಕ್ಕೂ ಹೆಚ್ಚು ಮಂದಿ ಪರದಾಟ
ಕೊಡಗು; ಉಕ್ಕಿ ಹರಿಯುತ್ತಿರುವ ಕಾವೇರಿ ನದಿಯ ನಡುವೆ ಬೋಟ್ ಒಂದು ಸಿಲುಕಿದ ಹತ್ತಕ್ಕೂ ಹೆಚ್ಚು ಮಂದಿ ಪರದಾಡಿದ ಘಟನೆ ನಡೆದಿದೆ. ಕೊಡಗು ಜಿಲ್ಲೆ ಕುಶಾಲನಗರದ ದುಬಾರೆಯಲ್ಲಿ ಈ ಘಟನೆ ನಡೆದಿದೆ.
ಬೋಟ್ ನಲ್ಲಿ 10ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಹಾಡಿಯ ಜನರು ದುಬಾರೆಯಿಂದ ಆನೆ ಕ್ಯಾಂಪ್ ಕಡೆ ತೆರಳುತ್ತಿದ್ದರು. ಈ ವೇಳೆ ಬೋಟ್ ಎಂಜಿನ್ ಆಫ್ ಆಗಿದೆ. ಕೂಡಲೇ ಎಚ್ಚೆತ್ತ ಬೋಟ್ ಚಾಲಕ, ದಡದಲ್ಲಿದ್ದ ಮರದ ಕೊಂಬೆಯನ್ನು ಹಿಡಿದ ಬೋಟ್ ನಿಲ್ಲಿಸಿದ್ದಾನೆ.
ಅರ್ಧ ಗಂಟೆಗೂ ಹೆಚ್ಚು ಕಾಲ ಬೋಟ್ನಲ್ಲಿದ್ದವರು ಅಲ್ಲಿಯೇ ಪರದಾಡಿದ್ದಾರೆ. ನಂತರ ಅವರನ್ನು ರಕ್ಷಿಸಲಾಯಿತು ಎಂದು ತಿಳಿದುಬಂದಿದೆ.