National

ನಾಳೆ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಮದುವೆ..!!

ಚಂಡೀಗಢ; ಪಂಜಾಬ್ ಮುಖ್ಯಮಂತ್ರಿ ಭಗವಂತ್​ ಮಾನ್ ಅವರು ನಾಳೆ ವೈದ್ಯೆಯಾಗಿರುವ ಡಾಗುರುಪ್ರೀತ್‌ ಕೌರ್‌ ಅವರನ್ನು ವರಿಸಲಿದ್ದಾರೆ.  ಚಂಡೀಗಢದ ತಮ್ಮ ನಿವಾಸದಲ್ಲಿ ಸರಳವಾಗಿ ವಿವಾಹ ನೆರವೇರಲಿದ ಎಂದು ಎಎನ್‌ಐ ಸುದ್ದಿ ಸಂಸ್ಥೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದೆ. ಈ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಭಾಗಿಯಾಗಲಿದ್ದಾರೆ.

ಭಗವಂತ್ ಮಾನ್​ ಅವರು ಇಂದ್ರಪ್ರೀತ್‌ ಕೌರ್‌ ಎಂಬುವವರನ್ನು ಮದುವೆಯಾಗಿದ್ದರು. ಆದ್ರೆ ದಾಂಪತ್ಯದಲ್ಲಿ ವಿರಸ ಉಂಟಾಗಿದ್ದರಿಂದಾಗಿ ಆರು ವರ್ಷದ ಹಿಂದೆ ಇಂದ್ರಪ್ರೀತ್‌ಗೆ ವಿಚ್ಛೇದನ ನೀಡಿದ್ದರು.  ಸದ್ಯ ಇಂದ್ರಪ್ರೀತ್‌ ಅವರು ಅಮೆರಿಕಾದಲ್ಲಿ ಎರಡು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದಾರೆ. ಭಗವಂತ್ ಮಾನ್​ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಡಾ. ಗುರುಪ್ರೀತ್ ಕೌರ್​ ಎಂಬಿಬಿಎಎಸ್​​ ಪದವೀಧರೆ ಆಗಿದ್ದು, ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Share Post