ಬೇನಾಮಿ ಆಸ್ತಿಗಾಗಿಯೇ ಚಂದ್ರಶೇಖರ ಗುರೂಜಿ ಕೊಲೆ; ಆರೋಪಿಗಳ ತಪ್ಪೊಪ್ಪಿಗೆ
ಹುಬ್ಬಳ್ಳಿ; ಚಂದ್ರಶೇಖರ ಗುರೂಜಿ ಹಂತಕರನ್ನು ಪೊಲೀಸರು ತೀವ್ರತ ವಿಚಾರಣೆಗೊಳಪಡಿಸಿದ್ದಾರೆ. ಪೊಲೀಸರ ಅನುಮಾನದಂತೆಯೇ ಈ ಕೊಲೆ ನಡೆದಿದೆ ಎಂಬುದು ಈಗ ಸಾಬೀತಾಗಿದೆ. ಬೇನಾಮಿ ಆಸ್ತಿಗಾಗಿಯೇ ಚಂದ್ರಶೇಖರ ಗುರೂಜಿಯನ್ನು ಕೊಲೆ ಮಾಡಿರುವುದಾಗಿ ಆರೋಪಿಗಳಾದ ಮಹಾಂತೇಶ್ ಹಾಗೂ ಮಂಜುನಾಥ್ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಚಂದ್ರಶೇಖರ ಗುರೂಜಿಯವರು ಸಿಜಿ ಪರಿವಾರ್ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಸರಳ ವಾಸ್ತು ನಡೆಸುತ್ತಿದ್ದರು. ಈ ಸಂಸ್ಥೆಯಲ್ಲಿ ಆರೋಪಿಗಳಿಬ್ಬರೂ ಕೆಲಸ ಮಾಡುತ್ತಿದ್ದರು. ನೋಟ್ ಬ್ಯಾನ್ ನಂತರ ಗುರೂಜಿ ಸಾಕಷ್ಟು ನಷ್ಟ ಅನುಭವಿಸಿದ್ದರು. ಇನ್ನೊಂದೆಡೆ ಆರೋಪಿ ಮಹಾಂತೇಶ್ ಹೆಸರಲ್ಲಿ ಗುರೂಜಿ ಬೇನಾಮಿ ಆಸ್ತಿ ಮಾಡಿದ್ದರು ಎನ್ನಲಾಗಿದೆ. ಇದರಲ್ಲಿ ಒಂದು ಆಸ್ತಿಯನ್ನು ಗುರೂಜಿ ಐದು ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. ಉಳಿದ ಆಸ್ತಿಯನ್ನೂ ಮಾರಿ ಹಣಕೊಡುವಂತೆ ಗುರೂಜಿ ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ. ಆದ್ರೆ ಇದಕ್ಕೆ ಒಪ್ಪದ ಮಹಾಂತೇಶ್, ಚಂದ್ರಶೇಖರ್ ಗುರೂಜಿಯನ್ನು ಮುಗಿಸಲು ಸ್ಕೆಚ್ ರೂಪಿಸಿ ಅದರಲ್ಲಿ ಯಶಸ್ವಿಯಾಗಿದ್ದಾನೆ.