BengaluruCinema

ದೇಶಿ ನಾಯಿಗಳ ರಕ್ಷಣೆಗೆ 5 ಕೋಟಿ ರೂಪಾಯಿ ಮೀಸಲಿಡುತ್ತೇವೆ; ನಟ ರಕ್ಷಿತ್‌ ಶೆಟ್ಟಿ

ಬೆಂಗಳೂರು;  ದೇಶಿ ನಾಯಿಗಳ ದತ್ತು, ರಕ್ಷಣೆ, ಪೋಷಣೆಗೆ ಚಾರ್ಲಿ ಚಿತ್ರದ ಲಾಭಾಂಶದ ಶೇಕಡಾ 5ರಷ್ಟು ಹಣವನ್ನು ಅಂದರೆ ಸುಮಾರು 4 ರಿಂದ 5 ಕೋಟಿ ರೂಪಾಯಿಯಷ್ಟು ಹಣವನ್ನು ನೀಡುವುದಾಗಿ ನಟ ರಕ್ಷಿತ್‌ ಶೆಟ್ಟಿ ಘೋಷಣೆ ಮಾಡಿದ್ದಾರೆ. ‘777 ಚಾರ್ಲಿ’ ಬಿಡುಗಡೆಯಾಗಿ 25 ದಿನ ಪೂರೈಸಿದ ಹಿನ್ನಲೆಯಲ್ಲಿ ಇಂದು ಆಯೋಜಿಸಲಾಗಿದ್ದು ಸುದ್ದಿಗೋಷ್ಠಿಯಲ್ಲಿ ಅವರು ಈ ಘೊಷಣೆ ಮಾಡಿದ್ದಾರೆ. 

ನಾಯಿಗಳನ್ನು ದತ್ತು ಪಡೆಯುವ ಕುರಿತು ಸಂದೇಶವನ್ನು ಚಾರ್ಲಿ ಚಿತ್ರದ ಮೂಲಕ ಸಾರಲಾಗಿದೆ. ಈ  ಸಿನಿಮಾ 150 ಕೋಟಿ ರೂಪಾಯಿ ವ್ಯವಹಾರ ಮಾಡಿದೆ. ಇದರಲ್ಲಿ 90 ರಿಂದ 100 ಕೋಟಿ ರೂಪಾಯಿವರೆಗೆ ನಿರ್ಮಾಪಕರ ಕೈಸೇರಲಿದೆ. ಬಂದಿರುವ ಲಾಭದಲ್ಲಿ ಶೇಕಡಾ 5 ರಷ್ಟನ್ನು ಚಾರ್ಲಿ ಹೆಸರಲ್ಲಿ ದೇಶದಾದ್ಯಂತ ಇರುವ ದೇಶೀಯ ತಳಿಯ ನಾಯಿಗಳ ದತ್ತು ಮತ್ತು ರಕ್ಷಣಾ ಕೇಂದ್ರಗಳಿಗೆ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ನೀಡಲಿದ್ದೇವೆ. ಈ ಹಣವನ್ನು ನಾವು ನೇರವಾಗಿ ಹಂಚುವ ಉದ್ದೇಶವಿಟ್ಟುಕೊಂಡಿದ್ದೇವೆ. ಹೀಗಾಗದೇ ಇದ್ದಲ್ಲಿ ಚಾರ್ಲಿ ಹೆಸರಲ್ಲಿ ಒಂದು ಖಾತೆ ತೆರೆದು ಅದರಲ್ಲಿ ಈ ಹಣವನ್ನಿಟ್ಟು, ಅದರಿಂದ ಬರುವ ಬಡ್ಡಿಯನ್ನು ಇಂತಹ ಕೇಂದ್ರಗಳಿಗೆ ಪ್ರತಿ ತಿಂಗಳು ಸಹಾಯದ ರೂಪದಲ್ಲಿ ನೀಡಲಿದ್ದೇವೆ ಎಂದು ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ.

 

Share Post