Bengaluru

ಸರ್ಕಾರಿ ಶಾಲಾ ಮಕ್ಕಳಿಗೂ ಸ್ಕೂಲ್‌ ಬಸ್‌ ವ್ಯವಸ್ಥೆ; ಸರ್ಕಾರ ಅನುಮತಿ

ಬೆಂಗಳೂರು;  ಖಾಸಗಿ ಶಾಲೆಗಳ ರೀತಿಯಲ್ಲೇ  ಸರ್ಕಾರಿ ಶಾಲೆಗಳ ಮಕ್ಕಳಿಗೂ ಸ್ಕೂಲ್ ಬಸ್ ವ್ಯವಸ್ಥೆ ಮಾಡುವುದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಮಕ್ಕಳಿಗೆ ಶಾಲಾ ವಾಹನ ಖರೀದಿಗೆ ಸರ್ಕಾರ ಗ್ರೀನ್‌ ಸಿಗ್ನಲ್‌ ನೀಡಿದೆ.

ಇನ್ಮುಂದೆ ಖಾಸಗಿ ಶಾಲೆಗಳಂತೆ ಮಕ್ಕಳಿಗೆ ಪಿಕ್ ಅಪ್ &  ಡ್ರಾಪ್ ಕೊಡಲಾಗುತ್ತದೆ. ಬಸ್ ಖರೀದಿಗೆ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಬಳಕೆ ಮಾಡಲಾಗುತ್ತದೆ.

ಚಾಲಕರ ವೇತನ, ಡೀಸೆಲ್ ಖರೀದಿಗೆ ಈ ಹಣ ಬಳಕೆಗೆ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದೆ. ರಾಜ್ಯದಲ್ಲಿ ಒಟ್ಟು 48,285 ಶಾಲೆಗಳು ಹಾಗೂ 6,312 ಅನುದಾನಿತ ಶಾಲೆಗಳಿದ್ದು ಸುಮಾರು 65 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

Share Post