NationalPolitics

ಎಂಐಎಂ ಪಕ್ಷದ ನಾಲ್ವರು ಶಾಸಕರು ಆರ್‌ಜೆಡಿ ಪಕ್ಷಕ್ಕೆ ಸೇರ್ಪಡೆ

ಪಾಟ್ನಾ; ಬಿಹಾರದ ನಾಲ್ವರು ಎಐಎಂಐಎಂ ಶಾಸಕರು ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್‌ಜೆಡಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಎಐಎಂಐಎಂ ಶಾಸಕರಾದ ಶಹನವಾಜ್, ಮಹಮ್ಮದ್ ಅನ್ಜಾರ್ ನಯೀಮಿ, ಮಹಮ್ಮದ್ ಇಝಾರ್ ಅಸ್ಫಿ ಮತ್ತು ಸೈಯದ್ ರುಕ್ನುದ್ದೀನ್ ಆರ್‌ಜೆಡಿಗೆ ಸೇರ್ಪಡೆಯಾದವರು ಎಂದು ತಿಳಿದುಬಂದಿದೆ. ಬಿಹಾರದಲ್ಲಿ ಚುನಾವಣೆ ಬರುತ್ತಿದೆ. ಇಂತಹ ಸಂದರ್ಭದಲ್ಲಿ ನಾಲ್ವರು ಶಾಸಕರು ಪಕ್ಷಾಂತರ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್‌ ಈ ಬಗ್ಗೆ ಹೇಳಿಕೆ ನೀಡಿದ್ದು, ಐವರು ಎಐಎಂಐಎಂ ಶಾಸಕರ ಪೈಕಿ ನಾಲ್ವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಾವು ಅವರನ್ನು ಸ್ವಾಗತಿಸುತ್ತೇವೆ. ಬಿಹಾರ ವಿಧಾನಸಭೆಯಲ್ಲಿ ನಮ್ಮದೇ ದೊಡ್ಡ ಪಕ್ಷವಾಗಿದೆ ಎಂದು ಹೇಳಿದ್ದಾರೆ. ಬಿಹಾರ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಐದು ಸೀಟುಗಳನ್ನು ಗೆದ್ದುಕೊಂಡಿತ್ತು.

Share Post