CinemaNational

ಮೂರನೇ ಮದುವೆಗೆ ಸಜ್ಜಾದಳಾ ಚಿರಂಜೀವಿ ಪುತ್ರಿ ಶ್ರೀಜಾ..?

ಹೈದರಾಬಾದ್‌; ತೆಲುಗಿನ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಮಗಳು ಶ್ರೀಜಾ ಮೂರನೇ ಮದುವೆಗೆ ಸಿದ್ಧತೆ ನಡೆಸಿದ್ದಾಳೆ ಎಂಬ ಮಾತುಗಳು ಕೇಳಿಬರುತ್ತಿವೆ.  ಕಲ್ಯಾಣ್ ಜತೆಗಿನ ಶ್ರೀಜಾ ವಿಚ್ಛೇದನದ ಬಗ್ಗೆ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ, ಮೂರನೇ ಮದುವೆಗೆ ಸಿದ್ಧತೆ ನಡೆಸಿದ್ದಾಳೆಂಬ ಸುದ್ದಿಗಳೂ ಹೆಚ್ಚು ಪ್ರಚಲಿತದಲ್ಲಿವೆ. 

ಚಿರಂಜೀವಿ ಪುತ್ರಿ ಶ್ರೀಜಾ ಈ ಹಿಂದೆ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ತಮ್ಮ ಹೆಸರಿನಿಂದ ಪತಿಯ ಹೆಸರನ್ನು ತೆಗೆದು ಹಾಕಿದ್ದರು. ಆಗಲೇ ಒಂದಷ್ಟು ಊಹಾ ಪೋಹಗಳು ಹಬ್ಬಿದ್ದವು. ಆದರೆ ಇವರೆಗೂ ಶ್ರೀಜಾ ಮತ್ತು ಕಲ್ಯಾಣ್ ಜತೆಗಿನ ಡಿವೋರ್ಸ್ ಕುರಿತು ಯಾವುದೇ ಅಧಿಕೃತ ಮಾಹಿತಿ ಮೆಗಾಸ್ಟಾರ್ ಕುಟುಂಬ ಕೊಟ್ಟಿಲ್ಲ.

ಶ್ರೀಜಾ 2007ರಲ್ಲಿ ಮನೆಯವರ ವಿರುದ್ಧ ನಿಂತು ಶಿರೀಶ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಕಾರಣಾಂತರಗಳಿಂದ ಅವರಿಂದ ಡಿವೋರ್ಸ್ ಪಡೆದು, 2016ರಲ್ಲಿ ತಂದೆ ನೋಡಿರುವ ಹುಡುಗ ಕಲ್ಯಾಣ್ ದೇವ್ ಅವರನ್ನು ಮದುವೆಯಾದರು. ಈಗ ಈ ಜೋಡಿಯ ಕುರಿತು ವಿಚ್ಛೇದನದ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಈ ಬೆನ್ನಲ್ಲೇ ಮೆಗಾಸ್ಟಾರ್ ಪುತ್ರಿ ಮೂರನೇ ಮದುವೆಗೆ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.  ಆದ್ರೆ ಇದು ದೃಢಪಟ್ಟಿಲ್ಲ. ಈ ಬಗ್ಗೆ ಊಹಾಪೋಹಗಳೆದ್ದಿವೆ ಅಷ್ಟೇ.

 

Share Post