International

91ನೇ ವಯಸ್ಸಿನಲ್ಲಿ ನಾಲ್ಕನೇ ಪತ್ನಿಗೆ ರೂಪರ್ಟ್‌ ಮುರ್ಡೋಕ್‌ ವಿಚ್ಛೇದನ

ಮಾಧ್ಯಮ ಉದ್ಯಮಿ ರೂಪರ್ಟ್ ಮುರ್ಡೋಕ್ ತಮ್ಮ 91 ನೇ ವಯಸ್ಸಿನಲ್ಲಿ ವಿಚ್ಛೇದನ ಪಡೆಯುತ್ತಿದ್ದಾರೆ. 65ರ ಹರೆಯದ ಜೆರ್ರಿ ಹಾಲ್ ಜತೆಗಿನ ವಿವಾಹವನ್ನು ಅವರು ಕಡಿದುಕೊಳ್ಳುತ್ತಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಉದ್ಯಮಿ ರೂಪರ್ಟ್ ಮುರ್ಡೋಕ್ ಅವರು ಹಾಲಿವುಡ್ ನಟಿ ಜೆರ್ರಿ ಹಾಲ್ ಅವರನ್ನು 2016 ರಲ್ಲಿ ವಿವಾಹವಾದರು. ರೂಪರ್ಟ್ ಮುರ್ಡೋಕ್ ನಾಲ್ಕನೇ ಬಾರಿಗೆ ವಿಚ್ಛೇದನ ಪಡೆದಿದ್ದಾರೆ. ಅವರು ಮೊದಲು 1956 ರಲ್ಲಿ ಆಸ್ಟ್ರೇಲಿಯಾದ ಫ್ಲೈಟ್ ಅಟೆಂಡೆಂಟ್ ಪೆಟ್ರೀಷಿಯಾ ಬುಕರ್ ಅವರನ್ನು ವಿವಾಹವಾದರು. ನಂತರ ಅವರು 1967 ರಲ್ಲಿ ಅವರಿಗೆ ವಿಚ್ಛೇದನ ನೀಡಿದರು ಮತ್ತು ಸ್ಕಾಟಿಷ್ ಮೂಲದ ಪತ್ರಕರ್ತೆ ಅನಾ ಮಾನ್ ಅವರನ್ನು ವಿವಾಹವಾದರು.

ಅವರು 1999 ರಲ್ಲಿ ಅವರಿಗೆ ವಿಚ್ಛೇದನ ನೀಡಿದರು ಮತ್ತು ಚೀನಾ ಮೂಲದ ಉದ್ಯಮಿ ವೆಂಡಿ ಡೆಂಗ್ ಅವರನ್ನು ವಿವಾಹವಾದರು. 2014 ರಲ್ಲಿ ವಿಚ್ಛೇದನ ಪಡೆದರು. ಮುರ್ಡೋಕ್ ನಂತರ ಜೆರ್ರಿ ಹಾಲ್ ಅವರನ್ನು ವಿವಾಹವಾದರು.

Share Post