Bengaluru

ಪಠ್ಯಪರಿಷ್ಕರಣೆ ವಾಪಸ್‌ಗೆ ಸಲಹೆ; ಗೌಡರ ಸಲಹೆ ಗಂಭೀರವಾಗಿ ತೆಗೆದುಕೊಳ್ಳುತ್ತೇನೆಂದ ಸಿಎಂ

ಬೆಂಗಳೂರು; ಪಠ್ಯಪುಸ್ತಕ ಪರಿಷ್ಕರಣೆ ಸರಿಯಾಗಿ ಆಗಿಲ್ಲ.  ಹೀಗಾಗಿ ಈ ಬಾರಿ ಬರಗೂರು ರಾಮಚಂದ್ರ ಸಮಿತಿ ಪರಿಷ್ಕರಿಸಿ ಪುಸ್ತಕಗಳನ್ನೇ ಪರಗಣಿಸಬೇಕೆಂದು ಮಾಜಿ ಪ್ರಧಾನಿ ದೇವೇಗೌಡರು ಸಿಎಂ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ದೇವೇಗೌಡರ ಸಲಹೆ ಗಂಭಿರವಾಗಿ ಪರಿಗಣಿಸುತ್ತೇವೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೇವೇಗೌಡರು ನಮಗೆಲ್ಲ ಹಿರಿಯರು. ಹೀಗಾಗಿ ದೇವೇಗೌಡರು ಬರೆದ ಪತ್ರವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೇನೆ. ನಾಳೆ ಶಿಕ್ಷಣ ಇಲಾಖೆ ಮುಖ್ಯಸ್ಥರ ಸಭೆ ನಡೆಸುತ್ತೇನೆ. ಏನೆಲ್ಲಾ ಮಾಡಲು ಸಾಧ್ಯವೋ ತೀರ್ಮಾನಿಸುತ್ತೇವೆ. ನಮ್ಮ ತೀರ್ಮಾನದ ನಂತರ ಮತ್ತೆ ದೇವೇಗೌಡರ ಪತ್ರಕ್ಕೆ ಉತ್ತರವಾಗಿ ಅವರಿಗೆ ಪತ್ರ ಬರೆಯುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

 

Share Post