National

ಅಗ್ನಿಪಥ್‌ ವಿರೋಧಿಸಿ ಹಿಂಸಾಚಾರ; ಇದುವರೆಗೆ 200 ಕೋಟಿ ರೂ. ನಷ್ಟ..!

ಪಾಟ್ನಾ; ಅಗ್ನಿಫಥ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ 200 ಕೋಟಿ ರೂ. ಮೌಲ್ಯದ ಆಸ್ತಿ ನಷ್ಟವಾಗಿದೆ. ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ಕಚೇರಿಗಳು, ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ. ಹೀಗಾಗಿ ಭಾರಿ ಪ್ರಮಾಣದ ನಷ್ಟವುಂಟಾಗಿದೆ.

50 ರೈಲು ಬೋಗಿಗಳಿಗೆ ಬೆಂಕಿ ಹಚ್ಚಲಾಗಿದೆ. 5 ರೈಲ್ವೆ ಇಂಜಿನ್‌ಗಳು ಸಂಪೂರ್ಣ ಕರಕಲಾಗಿವೆ. ಇನ್ನೂ ಅನೇಕ ತಾಂತ್ರಿಕ ಉಪಕರಣಗಳು ಬೆಂಕಿಗೆ ಆಹುತಿಯಾಗಿವೆ. 200 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಅದರಲ್ಲಿ 4 ಎಕ್ಸ್‌ಪ್ರೆಸ್‌‌ ರೈಲುಗಳು ಸೇರಿದಂತೆ ಪೂರ್ವ ಉತ್ತರ ರೈಲ್ವೆಯ 30 ರೈಲು ಸಂಚಾರ ರದ್ದಾಗಿದೆ ಎಂದು ದಾನಾಪುರ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಪ್ರಭಾತ್‌ಕುಮಾರ್ ಮಾಹಿತಿ ನೀಡಿದ್ದಾರೆ.

Share Post