ವಿಚಾರಣೆಗೆ ಕರೆದರೆ ಯಾರಾದರೂ ಪ್ರತಿಭಟನೆ ಮಾಡ್ತಾರಾ..?; ಆರಗ ಜ್ಞಾನೇಂದ್ರ ಪ್ರಶ್ನೆ
ಬೆಂಗಳೂರು; ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ರಾಹುಲ್ ಗಾಂಧಿಯನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದಾರೆ. ವಿಚಾರಣೆಗೆ ಕರೆದರೆ ಯಾರಾದರೂ ಪ್ರತಿಭಟನೆ ಮಾಡ್ತಾರಾ..? ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ರಾಜಭವನ ಚಲೋ ಹಮ್ಮಿಕೊಂಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೊವಿಡ್ ಹೆಚ್ಚಾಗುವ ವೇಳೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಕಾಂಗ್ರೆಸ್ ಗುಲಾಮಿತನ ಎಂಥಾದ್ದು ಎಂದು ಇದರಿಂದಲೇ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.
ಜನರಿಗೊಂದು, ಕಾಂಗ್ರಸ್‌ಗೊಂದು ಕಾನೂನಾ..? ಎಂದು ಪ್ರಶ್ನೆ ಮಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ತಪ್ಪಿತಸ್ಥರಾಗಿದ್ದರೆ ಶಿಕ್ಷೆ ಅನುಭವಿಸುತ್ತಾರೆ. ಅಲ್ಲ ಅಂದರೆ ನಿರಾಳರಾಗುತ್ತಾರೆ. ವಿಚಾರಣೆಗೆ ಕರೆದರೆ ಯಾರಾದರೂ ಪ್ರತಿಭಟನೆ ಮಾಡುತ್ತಾರಾ..? ಎಂದು ಪ್ರಶ್ನೆ ಮಾಡಿದ್ದಾರೆ.