BengaluruPolitics

ಕೊತ್ವಾಲ್ ಶಿಷ್ಯ ಡಿಕೆಶಿ ಆಯ್ಕೆಗಳು ಅವರಂತೆಯೇ ಇರುತ್ತದೆ – ರಾಜ್ಯ ಬಿಜೆಪಿ

ಬೆಂಗಳೂರು; ರಾಹುಲ್‌ ಗಾಂಧಿ ವಿಚಾರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್‌ ಪಕ್ಷಕ್ಕೆ ಗೂಂಡಾ ಪಟ್ಟ ಕಟ್ಟಿದೆ.

 

ಬಿಜೆಪಿ ಸರಣಿ ಟ್ವೀಟ್‌ಗಳಲ್ಲೇನಿದೆ..?

ಟ್ವೀಟ್‌-೧

ಕೈ ನಾಯಕರು ಶ್ರಮಿಕರಿಗೆ, ದಲಿತರಿಗೆ, ಮಹಿಳೆಯರಿಗೆ ಸಹಾಯ ಹಸ್ತ ಚಾಚುವುದಿಲ್ಲ. ಅವರದ್ದೇನಿದ್ದರೂ ಕೈ ಕೈ ಮಿಲಾಯಿಸುವುದಷ್ಟೇ! ಅಣ್ಣನಂತೆ ತಮ್ಮ, ನಾಯಕರಂತೆ ಕಾರ್ಯಕರ್ತರು. ಕನಕಪುರವಿರಲಿ, ಬೆಂಗಳೂರಿರಲಿ ಅಥವಾ ದೆಹಲಿ ಇರಲಿ ಗೂಂಡಾಗಿರಿ ಮಾಡುವುದೇ ಇವರ ಪ್ರವೃತ್ತಿ.

ಟ್ವೀಟ್‌-೨

ಕನಕಪುರದ ಬಂಡೆಮಕ್ಕಳ ಮೇಲಿರುವ ಐಪಿಸಿ ಸೆಕ್ಷನ್ ಬಗ್ಗೆ ಬರೆದರೆ, ಪುಸ್ತಕವೇ ಬರೆಯಬಹುದು. ಇವರ ಹಾದಿಯನ್ನೇ ಯುವಾಧ್ಯಕ್ಷರು ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಪದಾಧಿಕಾರಿಗಳ ಪಟ್ಟಿಯಲ್ಲಿರುವವರಲ್ಲೂ ಐಪಿಸಿ ಸೆಕ್ಷನ್ ಬೋರ್ಡ್ ಹಾಕಿಕೊಂಡವರ ಸಂಖ್ಯೆ ಕಡಿಮೆಯೇನಿಲ್ಲ!

ಟ್ವೀಟ್‌-೩

ಕೊತ್ವಾಲ್ ಶಿಷ್ಯ ಡಿಕೆಶಿ ಆಯ್ಕೆಗಳು ಅವರಂತೆಯೇ ಇರುತ್ತದೆ. ಬೀದಿ ರೌಡಿಗಳು, ಬಿಟ್ ಕಾಯಿನ್ ಆಸಾಮಿಗಳಿಗೆ ಮುಂಚೂಣಿ ಘಟಕದ ನಾಯಕತ್ವ ನೀಡಲಾಗಿದೆ. ರೌಡಿ ಗುರುವಿಗೆ ಬೀದಿ ಗೂಂಡಾಗಳೇ ಶಿಷ್ಯರು!

Share Post