BengaluruPolitics

ಹೊರಟ್ಟಿಗೆ ಭರ್ಜರಿ ಗೆಲುವು; ಸತತ ಎಂಟನೇ ಬಾರಿ ವಿಜಯ ಮಾಲೆ

ಬೆಂಗಳೂರು; ಇತ್ತೀಚೆಗಷ್ಟೇ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದ ಬಸವರಾಜ ಹೊರಟ್ಟಿಯವರು ಸತತ ಎಂಟನೇ ಬಾರಿ ವಿಧಾನಪರಿಷತ್‌ ಪ್ರವೇಶ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಹೊರಟ್ಟಿಯವರು ಗೆದ್ದು ದಾಖಲೆ ನಿರ್ಮಿಸಿದ್ದಾರೆ.

ಕಳೆದ 42 ವರ್ಷಗಳಿಂದ ವಿಧಾನಪರಿಷತ್‌ ಸದಸ್ಯರಾಗಿರುವ ಹೊರಟ್ಟಿಯವರು ಇತ್ತೀಚೆಗೆ ಜೆಡಿಎಸ್‌ ಪಕ್ಷ ತೊರೆದಿದ್ದರು. ಬಿಜೆಪಿಯಲ್ಲಿ ಟಿಕೆಟ್‌ ನೀಡುತ್ತಾರೆಂಬ ಕಾರಣಕ್ಕೆ ಅವರು ಪಕ್ಷಾಂತರ ಮಾಡಿದ್ದರು. ಇದೀಗ ಅವರು ಪಕ್ಷಾಂತರ ಮಾಡಿಯೂ ಗೆಲುವು ತನ್ನದಾಗಿಸಿಕೊಂಡಿದ್ದಾರೆ. ಈ ಮೂಲಕ ಅವರು ಎಂಟನೇ ಬಾರಿ ವಿಧಾನಪರಿಷತ್‌ ಪ್ರವೇಶ ಮಾಡುತ್ತಿದ್ದಾರೆ.

ಕಾಂಗ್ರೆಸ್‍ನಿಂದ ಬಸವರಾಜ ಗುರಿಕಾರ, ಜೆಡಿಎಸ್‍ನಿಂದ ಶ್ರೀಶೈಲ್ ಗಡದಿನ್ನಿ, ಪಕ್ಷೇತರ ಅಭ್ಯರ್ಥಿಗಳಾಗಿ ಕರಬಸಪ್ಪ ಮಧ್ಯಾನ್ನದ, ಕೃಷ್ಣವಾಣಿ ಶ್ರೀನಿವಾಸಗೌಡ, ಫಕೀರಗೌಡ ಕಲ್ಲನಗೌಡರ, ವೆಂಕನಗೌಡ ಗೋವಿಂದಗೌಡರ ಚುನಾವಾಣಾ ಕಣದಲ್ಲಿದ್ದರು.

Share Post