ಸಿದ್ಧಾಂತ್ ಕಪೂರ್ ಪೊಲೀಸರ ಮುಂದೆ ಹೇಳಿದ್ದೇನು..?; ಆ ಸಿಗರೇಟ್ ಕೊಟ್ಟವರು ಯಾರು..?
ಬೆಂಗಳೂರು; ನಾನು ಡಿಜೆ ಆಗಿ ಕಾರ್ಯಕ್ರಮಗಳನ್ನು ನೀಡುತ್ತೇನೆ. ನಾನು ಡ್ರಗ್ಸ್ ಸೇವನೆ ಮಾಡುವುದಿಲ್ಲ ಎಂದು ನಟ ಹಾಗೂ ಡಿಜೆ ಸಿದ್ಧಾಂತ್ ಕಪೂರ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ನಿನ್ನೆ ಬಂಧನವಾಗಿ ಜಾಮೀನು ಪಡೆದಿದ್ದ ಸಿದ್ಧಾಂತ್ ಕಪೂರ್, ಇಂದು ಹಲಸೂರು ಪೊಲೀಸರ ಮುಂದೆ ಹಾಜರಾಗಿ ಪ್ರಕರಣದ ಬಗ್ಗೆ ಹೇಳಿಕೆ ನೀಡಿದ್ದಾರೆ.
ನಾನು ಕಾರ್ಯಕ್ರಮದಲ್ಲಿ ಡಿಜೆ ಆಗಿ ಪಾಲ್ಗೊಂಡಿದ್ದೆ. ನಾನು ಹೀಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದೇನೆ. ಆದ್ರೆ ನಾನು ಎಂದೂ ಡ್ರಗ್ಸ್ ಸೇವಿಸಿಲ್ಲ. ಆದ್ರೆ ಬೆಂಗಳೂರಿನ ಕಾರ್ಯಕ್ರಮದಲ್ಲಿ ಯಾರೋ ಸಿಗರೇಟ್ ನೀಡಿದ್ದರು. ಅದನ್ನು ಸೇವಿಸಿದ್ದೆ. ಅದ್ರಲ್ಲಿ ಏನಿತ್ತು ಎಂಬುದು ನನಗೆ ಗೊತ್ತಿರಲಿಲ್ಲ ಎಂದು ಸಿದ್ಧಾಂತ್ ಕಪೂರ್ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿದಬಂದಿದೆ.