CinemaNational

ನೂಪುರ್‌ ಶರ್ಮಾ ಹೇಳಿಕೆಗೆ ಖಂಡನೆ; ಹೌರಾದಲ್ಲಿ ಹಿಂಸಾಚಾರ

ನವದೆಹಲಿ; ಬಿಜೆಪಿ ನಾಯಕಿ ನೂಪುರ್‌ ಶರ್ಮಾ ಅವರು ಪ್ರವಾದಿ ಮಹ್ಮದ್‌ ಬಗ್ಗೆ ನೀಡಿದ ಹೇಳಿಕೆ ಖಂಡಿಸಿ, ದೇಶದ ವಿವಿದೆಡೆ ಇಂದೂ ಕೂಡಾ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ ಮುಂದುವರೆದಿದೆ. ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಕೈಮೀರುವ ಹಂತ ತಲುಪಿದೆ. ಹೌರಾದಲ್ಲಿ ಉದ್ತಿಕ್ತರ ಗುಂಪು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದೆ.

ಜಾರ್ಖಂಡ್‌, ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧೆಡೆ ನಿನ್ನೆಯಿಂದ ಮುಸ್ಲಿಂ ಸಂಘಟನೆಗಳು ಬೀದಿಗಿಳಿದಿವೆ. ಕೆಲವೆಡೆ ಕಲ್ಲು ತೂರಾಟ ನಡೆಸಲಾಗಿದೆ. ಇಂದೂ ಕೂಡಾ ಇಂತಹ ಘಟನೆಗಳು ಮುಂದುವರೆದಿದೆ. ಇಂದು ಮುಂಜಾನೆಯೇ ಹೌರಾದಲ್ಲಿ ಪೊಲೀಸರ ಮೇಲೆ ಉದ್ರಿಕ್ತರು ಕಲ್ಲು ತೂರಿದಿದ್ದಾರೆ. ಹೀಗಾಗಿ ಪೊಲೀಸರು ಉದ್ರಿಕ್ತರನ್ನು ಚದುರಿಸಲು ಅಶ್ರುವಾಯು ಪ್ರಯೋಗ ಮಾಡಿದ್ದಾರೆ.

 

ಇನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರು ಹಾಗೂ ಅಲ್ಲಿನ ಬಿಜೆಪಿ ಮುಖಂಡರುಗಳು ಸೇನೆ ನಿಯೋಜನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಉತ್ತ ಪ್ರದೇಶದಲ್ಲೂ ಪರಿಸ್ಥಿತಿ ಮಿತಿಮೀರಿದ್ದು, ಅಲ್ಲಿ 228 ಕಿಡಿಗೇಡಿಗಳನ್ನು ಬಂಧಿಸಲಾಗಿದೆ.

 

ಉತ್ತರ ಪ್ರದೇಶದಲ್ಲಿ 144 ಸೆಕ್ಷನ್‌ ಜಾರಿ ಮಾಡಲಾಗಿದೆ. ಇತ್ತ ಪಶ್ಚಿಮ ಬಂಗಾಳದಲ್ಲಿ ದ್ವೇಷ ಹರಡದಂತೆ ತಡೆಯಲು ಇಂಟರ್‌ನೆಟ್‌ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.

 

Share Post