National

ನೋಟುಗಳ ಮೇಲೆ ಗಾಂಧಿ ಚಿತ್ರ ಬದಲಾವಣೆ ಇಲ್ಲ; ಆರ್‌ಬಿಐ ಸ್ಪಷ್ಟನೆ

ಮುಂಬೈ; ಕರೆನ್ಸಿ ನೋಟುಗಳಲ್ಲಿ ಮಹಾತ್ಮ ಗಾಂಧೀಜಿ ಚಿತ್ರವನ್ನು ಬದಲಾಯಿಸಿ, ಬೇರೆಯವರ ಚಿತ್ರವನ್ನು ಬಳಸುವ ಯಾವುದೇ ಪ್ರಸ್ತಾವ ಇಲ್ಲ ನಮ್ಮ ಮುಂದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಸ್ಪಷ್ಟಪಡಿಸಿದೆ. ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ವರದಿಗಳಿಗೆ ಆರ್‌ಬಿಐ ಈ ಮೂಲಕ ಸ್ಪಷ್ಟನೆ ನೀಡಿದೆ.

ಹಾಲಿ ಇರುವ ಕರೆನ್ಸಿ ನೋಟುಗಳಲ್ಲಿ ಕೆಲವು ಬದಲಾವಣೆಗಳನ್ನು ತರುವ ಬಗ್ಗೆ ಆರ್‌ಬಿಐ ಆಲೋಚನೆ ನಡೆಸುತ್ತಿದ್ದು, ಮಹತ್ಮ ಗಾಂಧೀಜಿ ಚಿತ್ರಕ್ಕೆ ಬದಲಾಗಿ ರವೀಂದ್ರನಾಥ ಟ್ಯಾಗೋರ್ ಮತ್ತು ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಚಿತ್ರವನ್ನು ಬಳಸುವ ಬಗ್ಗೆ ಆರ್‌ಬಿಐ ಪರಿಶೀಲನೆ ನಡೆಸುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಅಂತಹ ಯಾವ ಪ್ರಸ್ತಾವವೂ ರಿಸರ್ವ್ ಬ್ಯಾಂಕ್‌ ಮುಂದೆ ಇಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

Share Post