ಪಠ್ಯಪುಸ್ತಕ ವಿವಾದ; ʻಮನೆ ಕೆಲಸದ ಹೆಣ್ಣು ಮಗಳುʼ ಕವಿತೆ ವಾಪಸ್
ಬೆಂಗಳೂರು; ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ವಿವಾದ ಎದ್ದಿರುವ ಹಿನ್ನೆಲೆಯಲ್ಲಿ ತಮ್ಮ ಕವಿತೆಯನ್ನು ಬೋಧಿಸಲು ನೀಡಿದ್ದ ಅನುಮತಿಯನ್ನು ಕವಿ ಎಸ್.ಜಿ. ಸಿದ್ದರಾಮಯ್ಯ ಅವರು ವಾಪಸ್ ಪಡೆದಿದ್ದಾರೆ. ‘ಮನೆಗೆಲಸದ ಹೆಣ್ಣುಮಗಳು’ ಎಂಬ ನನ್ನ ಕವಿತೆ 9ನೇ ತರಗತಿಯ ದ್ವಿತೀಯ ಭಾಷಾ ಪಠ್ಯವಾಗಿ ಸೇರಿದೆ. ಅದನ್ನು ಬೋಧಿಸಲು ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದೇನೆ‘ ಎಂದು ಕವಿ ಎಸ್.ಜಿ. ಸಿದ್ದರಾಮಯ್ಯ ತಿಳಿಸಿದ್ದಾರೆ.
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯನ್ನು ವಿರೋಧಿಸಿ ಜಿ.ರಾಮಕೃಷ್ಣ ಹಾಗೂ ದೇವನೂರ ಮಹದೇವ ತಾವು ಬರೆದಿದ್ದ ಪಾಠಗಳನ್ನು ಬೋಧಿಸದಂತೆ ಹೇಳಿ, ಅನುಮತಿಯನ್ನು ವಾಪಸ್ ಪಡೆದಿದ್ದರು. ಈ ಮೂಲಕ ಪ್ರತಿರೋಧ ವ್ಯಕ್ತಪಡಿಸಿದ್ದರು. ಇದೀಗ ಎಸ್.ಜಿ.ಸಿದ್ದರಾಮಯ್ಯ ಅವರ ಸರದಿ. ಅವರೂ ಕೂಡಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ಗೆ ಪತ್ರ ಬರೆದು, ನನ್ನ ಕವಿತೆಯನ್ನು ಶಾಲೆಯಲ್ಲಿ ಬೋಧಿಸಬೇಡಿ. ಅದಕ್ಕೆ ಕೊಟ್ಟ ಅನುಮತಿ ಹಿಂಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.